ADVERTISEMENT

ಯುದ್ಧಗಳು ಇಲ್ಲದೆ ಸೇನೆ ಮಹತ್ವ ಕಳೆದುಕೊಂಡಿದೆ

ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ವಿವಾದಾತ್ಮಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 19:42 IST
Last Updated 15 ಜೂನ್ 2015, 19:42 IST
ಯುದ್ಧಗಳು ಇಲ್ಲದೆ ಸೇನೆ  ಮಹತ್ವ ಕಳೆದುಕೊಂಡಿದೆ
ಯುದ್ಧಗಳು ಇಲ್ಲದೆ ಸೇನೆ ಮಹತ್ವ ಕಳೆದುಕೊಂಡಿದೆ   

ಜೈಪುರ (ಪಿಟಿಐ): ಕಳೆದ 40–50 ವರ್ಷಗಳಲ್ಲಿ ಯುದ್ಧಗಳನ್ನೇ ನಡೆಸದೆ ಭಾರತೀಯ ಸೇನೆ ಮಹತ್ವ ಕಳೆದು ಕೊಂಡಿದೆ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಭಾನುವಾರ ಇಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಅವರು, ಯೋಧರು ಇಂದು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಶಾಂತಿಯ ವೇಳೆ ಸೇನೆಯ ಬಗ್ಗೆ ಜನರ ಗೌರವ ಕಡಿಮೆಯಾಗಿದೆ’ ಎಂದು ಹೇಳಿದರು. ಇದೇ ವೇಳೆ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಅವರು, ತಾನು ಯುದ್ಧ ಮಾಡಬೇಕು ಎಂದು ಒತ್ತಾಯಿ ಸುತ್ತಿಲ್ಲ ಎಂದರು.

‘ರಕ್ಷಣಾ ವಿಷಯಗಳ ಸಂಬಂಧ ನಾನು ಹಲವು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಕೆಲವರು ಅವುಗಳಿಗೆ ಸ್ಪಂದಿಸಿದ್ದಾರೆ. ಆದರೆ ಕೆಲವರು ಏನೂ ಮಾಡಲಿಲ್ಲ. 40 ರಿಂದ 50 ವರ್ಷ ನಾವು ಯುದ್ಧಗಳನ್ನೇ ಮಾಡಲಿಲ್ಲ. ಆದರೆ ಇದರರ್ಥ ಯುದ್ಧ ನಡೆಸಬೇಕು ಎಂದಲ್ಲ.  ಯುದ್ಧಗಳನ್ನೇ ಮಾಡದೆ ಸೇನೆಯ ಮಹತ್ವವೇ ಕಡಿಮೆಯಾಗಿದೆ’ ಎಂದರು.

ಎರಡು ತಲೆಮಾರು ಯುದ್ಧಗಳನ್ನೇ ಕಾಣದೆ ಕಳೆದುಹೋಗಿದೆ. ಯಾವ ದೇಶ ತನ್ನ ಸೇನೆಯನ್ನು ರಕ್ಷಿಸಲು ವಿಫಲವಾ ಗುತ್ತದೊ ಅದು ಅಭಿವೃದ್ಧಿಯಾಗಲಾರದು ಎಂದರು.

ಕಾಂಗ್ರೆಸ್‌ ತೀವ್ರ ಆಕ್ಷೇಪ
ಯುದ್ಧಗಳಿಲ್ಲದೆ ಸೇನೆಯ ಮಹತ್ವ ಕಡಿಮೆಯಾಗಿದೆ ಎಂಬ ರಕ್ಷಣಾ ಸಚಿವ ಹೇಳಿಕೆಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಬಿಜೆಪಿ ಮುಖಂಡರು ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ರಕ್ಷಣಾ ಇಲಾಖೆ ಸೂಕ್ಷ್ಮ  ಇಲಾಖೆ. ಇದರ ಸಚಿವರು ಮಾತನಾಡುವಾಗ ಯೋಚನೆ ಮಾಡಬೇಕು.  ಪರಿಕ್ಕರ್‌ ಪದೇ ಪದೇ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು’ ಎಂದು ಕಾಂಗ್ರೆಸ್‌ ವಕ್ತಾರ ಪಿ.ಎಲ್. ಪುನಿಯಾ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.