ADVERTISEMENT

ಲೈಂಗಿಕ ದೌರ್ಜನ್ಯದ ಆರೋಪ: ಸಂಗೀತ ಉತ್ಸವದಿಂದ ಏಳು ಮಂದಿಗೆ ಕೊಕ್‌

ಪಿಟಿಐ
Published 25 ಅಕ್ಟೋಬರ್ 2018, 18:43 IST
Last Updated 25 ಅಕ್ಟೋಬರ್ 2018, 18:43 IST

ಚೆನ್ನೈ: ಲೈಂಗಿಕ ದೌರ್ಜನ್ಯದ ಆರೋಪಕ್ಕಾಗಿ ಮದ್ರಾಸ್‌ ಸಂಗೀತ ಅಕಾಡೆಮಿಯು ಏಳು ಸಂಗೀತಗಾರರನ್ನು ‘ಮರ್ಗಝಿ’ ಸಂಗೀತ ಉತ್ಸವದಿಂದ ಕೈಬಿಟ್ಟಿದೆ.

ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಈ ಉತ್ಸವ ನಡೆಯುತ್ತದೆ. ಕಲಾವಿದರಾದ ಎನ್‌. ರವಿಕಿರಣ್‌, ಒ.ಎಸ್‌. ತ್ಯಾಗರಾಜನ್‌, ಮನ್ನರ್ಗುಡಿ ಎ. ಈಶ್ವರನ್‌, ಶ್ರೀಮುಷ್ಣಂ ವಿ. ರಾಜಾ ರಾವ್‌, ತಿರುವರೂರ್‌ ವೈದ್ಯನಾಥನ್‌, ನಾಗೈ ಶ್ರೀರಾಮ ಮತ್ತು ಆರ್‌. ರಮೇಶ್‌ ಅವರನ್ನು ಉತ್ಸವದಿಂದ ದೂರ ಇಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎನ್‌. ಮುರುಳಿ ತಿಳಿಸಿದ್ದಾರೆ.

’ಮೀ ಟೂ ಅಭಿಯಾನಕ್ಕೆ ನಮ್ಮ ಬೆಂಬಲವಿದೆ. ಸಂತ್ರಸ್ತರ ಜತೆ ನಾವಿದ್ದೇವೆ ಎನ್ನುವುದನ್ನು ತೋರಿಸಲು ಈ ಕ್ರಮಕೈಗೊಳ್ಳಲು. ಆದರೆ, ಈ ಕಲಾವಿದರು ತಪ್ಪಿತಸ್ಥರು’ ಎಂದು ಅಕಾಡೆಮಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.