ADVERTISEMENT

ವ್ಯಂಗ್ಯಚಿತ್ರ: ಎನ್‌ಸಿಇಆರ್‌ಟಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ನವದೆಹಲಿ (ಪಿಟಿಐ): ಎನ್‌ಸಿಇಆರ್‌ಟಿ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಿ ಪ್ರಕಟವಾದ ಕೆಲ ವಿವಾದಾತ್ಮಕ ಕಾರ್ಟೂನ್‌ಗಳ ಬಗ್ಗೆ ಪರಿಶೀಲಿಸಲು ರಚಿಸಲಾಗಿದ್ದ ಥೋರಟ್ ಸಮಿತಿ ಮಾಡಿರುವ ಶಿಫಾರಸುಗಳ ಕುರಿತು ಎನ್‌ಸಿಇಆರ್‌ಟಿ ಚರ್ಚೆಯನ್ನು ಆರಂಭಿಸಿದೆ.

ಆದರೆ, ಪರಿಶೀಲನಾ ಸಮಿತಿ ಸಲ್ಲಿಸಿರುವ ಶಿಫಾರಸುಗಳನ್ನು ಪೂರ್ಣವಾಗಿ ಒಪ್ಪಿಕೊಳ್ಳದಿರುವ ಸಾಧ್ಯತೆಗಳಿವೆ.
ಈ ಸಂಬಂಧ, ಬುಧವಾರ ಸೇರಿದ್ದ ಸಭೆಯಲ್ಲಿ ಎನ್‌ಸಿಇಆರ್‌ಟಿ ಮಾಜಿ ಸಲಹೆಗಾರ ಯೋಗೇಂದ್ರ ಯಾದವ್ ಪಠ್ಯಪುಸ್ತಕ್ಕೆ ಆರಿಸಲಾದ ವ್ಯಂಗ್ಯ ಚಿತ್ರಗಳನ್ನು ಏಕೆ ಆರಿಸಲಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರು.

ಈ ವಿವಾದದ ಕಾರಣ ಯಾದವ್ ಹಾಗೂ ಸುಹಾಸ್ ಪಲ್ಕಿಕರ್ ಪಠ್ಯಪುಸ್ತಕ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದರು. ಎನ್‌ಸಿಇಆರ್‌ಟಿ ನಿರ್ದೇಶಕ ಪರ್ವೀನ್ ಸಿಂಕ್ಲೇರ್, ಸಮಾಜ ವಿಜ್ಞಾನ ಕುರಿತ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯ ನಿರ್ದೇಶಕ ಹರಿ ವಾಸುದೇವನ್ ಹಾಗೂ ಎನ್‌ಸಿಇಆರ್‌ಟಿ ಮಾಜಿ ಅಧ್ಯಕ್ಷ ಕೃಷ್ಣಕಾಂತ್ ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.