ADVERTISEMENT

ಶತಾಬ್ದಿ ರೈಲಿನಲ್ಲೇ ಇನ್ನು ಶಾಪಿಂಗ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಇನ್ನು ರೈಲಿನ್ಲ್ಲಲೂ ನೀವು ಶಾಪಿಂಗ್ ಮಾಡಬಹುದು!
ಹೌದು, ರೈಲ್ವೆ ಇಲಾಖೆಯು ಶತಾಬ್ದಿ ರೈಲುಗಳಲ್ಲಿ ಇಂತಹ ನೂತನ ಯೋಜನೆಯೊಂದನ್ನು ಪರಿಚಯಿಸಲು ಮುಂದಾಗಿದೆ.

ದೂರದ ಊರುಗಳಿಗೆ ಪ್ರಯಾಣ ಬೆಳೆಸುವವರು ರೈಲಿನಲ್ಲೇ ಶಾಪಿಂಗ್ ಇನ್ನುಮುಂದೆ ಮಾಡಬಹುದು.
ಸುಗಂಧದ್ರವ್ಯ, ತ್ವಚೆ ಸಂರಕ್ಷಣಾ ಉತ್ಪನ್ನ, ಚಾಕೋಲೆಟ್, ಬ್ಯಾಗು, ಕೈಗಡಿಯಾರ, ಚಿನ್ನದ ಆಭರಣಗಳು ಹಾಗೂ ಉಡುಗೊರೆಯ ವಸ್ತುಗಳು ಇಲ್ಲಿ ಲಭ್ಯವಾಗಲಿವೆ ಎಂದು ರೈಲ್ವೇ ಸಚಿವಾಲಯದ ಮೂಲಗಳು ತಿಳಿಸಿವೆ.

ಸದ್ಯಕ್ಕೆಕ್ಕೆ ಭೋಪಾಲ್ ಶತಾಬ್ದಿ ರೈಲಿನಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಜನರ ಪ್ರತಿಕ್ರಿಯೆ ನೋಡಿಕೊಂಡು ಇತರ ಶತಾಬ್ದಿ ರೈಲುಗಳಿಗೂ ವಿಸ್ತರಿಸಲಾಗುವುದು. ಇದರ ಜೊತೆಗೆ ಟ್ರಾಲಿ ವ್ಯವಸ್ಥೆ, ಮನರಂಜನೆ ನೀಡಲು ದೂರದರ್ಶನದ ವ್ಯವಸ್ಥೆಯನ್ನೂ ಕಲ್ಪಿಸಲು ಚಿಂತನೆ ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರೈಲಿನಲ್ಲಿ ಟ್ರ್ಯಾಲಿ ವ್ಯವಸ್ಥೆಯನ್ನು ಅಳವಡಿಸಲು ಮಾತುಕತೆ ನಡೆಸಲಾಗುತ್ತಿದ್ದು, ಪ್ರಾಯೋಗಿಕವಾಗಿ ಒಂದು ರೈಲಿನಲ್ಲಿ ಈ ಹೊಸ ವ್ಯವಸ್ಥೆಯನ್ನು ರೂಪಿಸಲಾಗುವುದು.

ಪ್ರತಿ ಶತಾಬ್ದಿ ರೈಲಿನಲ್ಲೂ ಇಂತಹ  ಎರಡು ಟ್ರ್ಯಾಲಿಗಳ ವ್ಯವಸ್ಥೆ ಇರುತ್ತವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.