ADVERTISEMENT

ಶಿಫಾರಸು ಪತ್ರ ವಿವಾದ: ಗಿಲಾನಿ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಲಷ್ಕರ್- ಎ- ತೊಯ್ಬಾದ ಬಂಧಿತ ಉಗ್ರವಾದಿ ಅಥೇಶಮ್ ಮಲಿಕ್‌ಗೆ ಪಾಕಿಸ್ತಾನದ ವೀಸಾ ಪಡೆಯಲು ಶಿಫಾರಸು ಪತ್ರ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹುರಿಯತ್ ಕಾನ್ಫರೆನ್ಸ್‌ನ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ ಅವರ ಹೇಳಿಕೆಯನ್ನು ದೆಹಲಿ ಪೊಲೀಸರು ಬುಧವಾರ ದಾಖಲಿಸಿಕೊಂಡರು.

ಗಿಲಾನಿ ನೀಡಿದ್ದರು ಎನ್ನಲಾದ ಶಿಫಾರಸು ಪತ್ರದ ಪ್ರತಿಯನ್ನು ಮಲಿಕ್‌ನಿಂದ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಹೇಳಿಕೆ ನೀಡುವ ಸಲುವಾಗಿ 82 ವರ್ಷದ ಗಿಲಾನಿ ತಮ್ಮ ಅಳಿಯ ಅಲ್ತಾಫ್ ಫಂತೂಷ್ ಮತ್ತು ನಿಕಟ ಸಹಚರ ಶಫಿ ರೇಶಿ ಅವರ ಜೊತೆ ಲೋಧಿ ರಸ್ತೆಯಲ್ಲಿನ ವಿಶೇಷ ಬಂದೀಖಾನೆಗೆ ಬಂದಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪತ್ರದ ಪ್ರತಿಯನ್ನು ಗಿಲಾನಿ ಅವರಿಗೆ ತೋರಿಸಿದ ಪೊಲೀಸರು ಮಲಿಕ್ ಜೊತೆಗಿನ ತಮ್ಮ ಸಂಬಂಧ ಏನೆಂದು ಪ್ರಶ್ನಿಸಿದ್ದಾಗಿ ಮೂಲಗಳು ತಿಳಿಸಿವೆ.

`ಯಾವುದೇ ಕಾಶ್ಮೀರಿ ಪ್ರಜೆ ಗಿಲಾನಿ ಅವರ ಬಳಿ ಬಂದು ಶಿಫಾರಸು ಪತ್ರ ಕೇಳಿದರೆ ಅವರು ಖಂಡಿತ ನೀಡುತ್ತಾರೆ~ ಎಂದು ಇದಕ್ಕೂ ಮುನ್ನ ಗಿಲಾನಿ ಅವರ ವಕ್ತಾರ ಅಯಾಜ್ ಅಕ್ಬರ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.