ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಸಂಗೀತ ನಿರ್ದೇಶಕ ಆದಿತ್ಯನ್ (63) ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ತಮಿಳು ಸಿನಿಮಾಗಳಿಗೆ ಹೆಚ್ಚಾಗಿ ಸಂಗೀತ ಸಂಯೋಜಿಸಿದ್ದ ಅವರು ಮಲಯಾಳ, ತೆಲುಗು ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ. ತಮಿಳು ವಾಹಿನಿ
ಯಲ್ಲಿ ನಿರೂಪಿಸಿದ ಅಡುಗೆ ಕಾರ್ಯಕ್ರಮಗಳೂ ಅವರಿಗೆ ಜನಪ್ರಿಯತೆ ತಂದುಕೊಟ್ಟಿವೆ.
ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.