ADVERTISEMENT

ಸತತ 12ನೇ ದಿನವೂ ಏರಿಕೆಯಾದ ಪೆಟ್ರೋಲ್‌, ಡೀಸೆಲ್‌ ದರ

ಏಜೆನ್ಸೀಸ್
Published 25 ಮೇ 2018, 10:20 IST
Last Updated 25 ಮೇ 2018, 10:20 IST
ಸತತ 12ನೇ ದಿನವೂ ಏರಿಕೆಯಾದ ಪೆಟ್ರೋಲ್‌, ಡೀಸೆಲ್‌ ದರ
ಸತತ 12ನೇ ದಿನವೂ ಏರಿಕೆಯಾದ ಪೆಟ್ರೋಲ್‌, ಡೀಸೆಲ್‌ ದರ   

ನವದೆಹಲಿ: ಇಂಧನ ದರಗಳು ಸತತ 12ನೇ ದಿನವೂ ಏರಿಕೆ ಕಂಡಿವೆ. ಮೇ 25ರ ಬೆಳಿಗ್ಗೆ 6ರಿಂದ ಅನ್ವಯ ಆಗುವಂತೆ ಪ್ರತಿ ಲೀಟರ್‌ ಪೆಟ್ರೋಲ್‌ 32 ಪೈಸೆ ಮತ್ತು ಡೀಸೆಲ್‌ 18 ಪೈಸೆ ಏರಿಕೆ ಆಗಿದೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ. ಅಮೆರಿಕಾದ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಇದರಿಂದ ತೈಲ ದರಗಳು ಹೆಚ್ಚಳವಾಗುತ್ತಿವೆ ಎನ್ನಲಾಗುತ್ತಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಹೆಚ್ಚುತ್ತಲೇ ಸಾಗಿರುವ ತೈಲ ದರಗಳ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಹರಿಹಾಯುತ್ತಿವೆ. 
*
ತೈಲ ದರಗಳ ಏರಿಕೆಯ ಬಿಸಿಯಿಂದ ಜನಸಾಮಾನ್ಯರನ್ನು ಉಳಿಸಲು ಕೇಂದ್ರ ಸರ್ಕಾರ ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ.
– ಧರ್ಮೇಂದ್ರ ಪ್ರಧಾನ್‌, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ
*

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಮಾರ್ಪಡಿಸಿದ ದರಗಳ ಪ್ರಕಾರ ಪ್ರಮುಖ ನಗರಗಳಲ್ಲಿನ ಪೆಟ್ರೋಲ್‌ ದರ(ಮೇ 25)

ADVERTISEMENT

ಬೆಂಗಳೂರು     ₹ 78.73
ದೆಹಲಿ           ₹ 77.83
ಮುಂಬೈ        ₹ 85.65
ಕೋಲ್ಕತ್ತಾ     ₹ 80.47
ಚೆನ್ನೈ           ₹ 80.80

ಡೀಸೆಲ್ ದರ

ಬೆಂಗಳೂರು ₹ 69.93
ದೆಹಲಿ       ₹ 68.75
ಮುಂಬೈ    ₹ 73.2
ಕೋಲ್ಕತ್ತಾ ₹ 71.30
ಚೆನ್ನೈ       ₹ 72.58

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.