ಲಖನೌ/ ನವದೆಹಲಿ (ಪಿಟಿಐ): ತಮ್ಮ ಬಿಜೆಪಿ ಸದಸ್ಯತ್ವವನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಉತ್ತರ ಪ್ರದೇಶದ ಕಳಂಕಿತ ಮಾಜಿ ಸಚಿವ ಬಾಬು ಸಿಂಗ್ ಕುಶಾವ ಪಕ್ಷವನ್ನು ಕೋರಿದ್ದಾರೆ. ಇತ್ತೀಚಿನ ಅವರ ಬಿಜೆಪಿ ಸೇರ್ಪಡೆಯಿಂದ ಪಕ್ಷದ ಒಳಗೆ ಹಾಗೂ ಹೊರಗೆ ಭಾರಿ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರು ಈ ಮನವಿ ಮಾಡಿದ್ದಾರೆ.
`ನನ್ನ ವಿರುದ್ಧದ ಆರೋಪದಿಂದ ನಾನು ಪಕ್ಷವನ್ನು ಅನಗತ್ಯವಾಗಿ ವಿವಾದಕ್ಕೆ ಸಿಲುಕಿಸಲು ಇಷ್ಟಪಡುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ಕುಶಾವ ಹೇಳಿದ್ದಾರೆ. ಅವರ ಈ ಪತ್ರವನ್ನು ಬಿಜೆಪಿ ಅಂಗೀಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.