ADVERTISEMENT

ಹೊಗೆ ಮಂಜು: ಸಮ–ಬೆಸ ಸಂಚಾರ ನಿಯಮ ಜಾರಿ ನಿರ್ಧಾರ ಹಿಂಪಡೆದ ದೆಹಲಿ ಸರ್ಕಾರ

ಪಿಟಿಐ
Published 11 ನವೆಂಬರ್ 2017, 11:51 IST
Last Updated 11 ನವೆಂಬರ್ 2017, 11:51 IST
ಹೊಗೆ ಮಂಜು: ಸಮ–ಬೆಸ ಸಂಚಾರ ನಿಯಮ ಜಾರಿ ನಿರ್ಧಾರ ಹಿಂಪಡೆದ ದೆಹಲಿ ಸರ್ಕಾರ
ಹೊಗೆ ಮಂಜು: ಸಮ–ಬೆಸ ಸಂಚಾರ ನಿಯಮ ಜಾರಿ ನಿರ್ಧಾರ ಹಿಂಪಡೆದ ದೆಹಲಿ ಸರ್ಕಾರ   

ನವದೆಹಲಿ: ವಾಹನಗಳಿಂದಾಗುವ ವಾಯುಮಾಲಿನ್ಯ ನಿಯಂತ್ರಿಸುವ ಸಂಬಂಧ ಯೋಜಿಸಲಾದ ಸಮ–ಬೆಸ ಸಂಖ್ಯೆ ವಾಹನಗಳ ಸಂಚಾರ ಸೂತ್ರ ಜಾರಿಗೊಳಿಸುವ ನಿರ್ಧಾರವನ್ನು ದೆಹಲಿ ಸರ್ಕಾರ ಶನಿವಾರ ಹಿಂಪಡೆದಿದೆ.

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾಯಕಾರಿ ಮಟ್ಟಕ್ಕಿಂತಲೂ ಹಲವು ಪಟ್ಟು ವಾಯುಮಾಲಿನ್ಯದ ಪ್ರಮಾಣ ಹೆಚ್ಚಿದ್ದು, ದಿನಬಿಟ್ಟು ದಿನ ಸಮ–ಬೆಸ ಸಂಖ್ಯೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಆಪ್‌ ಸರ್ಕಾರದ ಯೋಜನೆ ಜಾರಿಗೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಸಮ್ಮತಿಸಿತ್ತು. ಆದರೂ ಸಮ–ಬೆಸ ಸಂಚಾರ ಸೂತ್ರ ಜಾರಿಯಿಂದ ಸರ್ಕಾರ ಹಿಂದೆ ಸರಿದಿದೆ.

ಮಹಿಳೆಯರು ಚಾಲನೆ ಮಾಡುವ ವಾಹನ, ದ್ವಿಚಕ್ರ ವಾಹನಗಳು ಸೇರಿ ಬೆಸ–ಸಮ ನಿಯಮದಿಂದ ಸರ್ಕಾರ ನೀಡಿದ್ದ ವಿನಾಯಿತಿ ಹಿಂಪಡೆಯುವಂತೆ ಎನ್‌ಜಿಟಿ ಆದೇಶಿಸಿತ್ತು. ‘ಈ ಆದೇಶದ ಅನ್ವಯ ಆಂಬುಲೆನ್ಸ್‌, ಅಗ್ನಿಶಾಮಕ ವಾಹನ ಹೊರತು ಪಡಿಸಿ ಇನ್ನಾವುದೇ ವಾಹನಗಳಿಗೂ ನಿಯಮದಿಂದ ವಿನಾಯಿತಿ ಇಲ್ಲ. ಮಹಿಳೆಯರ ಸುರಕ್ಷತೆಯಲ್ಲಿ ಸರ್ಕಾರ ರಾಜಿಗೆ ಸಿದ್ಧವಿಲ್ಲ’ ಎಂದು ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಹೇಳಿದ್ದಾರೆ.

ADVERTISEMENT

ನ.13–17ರ ವರೆಗೂ ಸಮ–ಬೆಸ ಸಂಚಾರ ನಿಯಮ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.