ADVERTISEMENT

ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದ ಸ್ಥಳೀಯ ಆಡಳಿತಗಳು– ಡಿಜಿಟಲ್ ಸಮೀಕ್ಷೆ

ಪಿಟಿಐ
Published 13 ನವೆಂಬರ್ 2021, 10:11 IST
Last Updated 13 ನವೆಂಬರ್ 2021, 10:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್ ಲಸಿಕೆ ಪಡೆಯಬೇಕು ಎಂಬುದನ್ನು ಕೆಲವೆಡೆ ಸ್ಥಳೀಯ ಆಡಳಿತ, ಕಂಪನಿಗಳು ಮತ್ತು ಸಂಘಸಂಸ್ಥೆಗಳು ಕಡ್ಡಾಯಗೊಳಿಸಿವೆ. ‘ಲೋಕಲ್‌ಸರ್ಕಲ್’ ಹೆಸರಿನ ಡಿಜಿಟಲ್‌ ವೇದಿಕೆ ಈಚೆಗೆ ನಡೆಸಿದ ಸಮೀಕ್ಷೆಯಿಂದ ಇದು ತಿಳಿದುಬಂದಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ನಾಲ್ವರಲ್ಲಿ ಒಬ್ಬರು ಸ್ಥಳೀಯ ಆಡಳಿತ, ಕಂಪನಿಗಳು ಮತ್ತು ಸಂಘಗಳು ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿವೆ ಎಂದು ಹೇಳಿದ್ದಾರೆ.

328 ಜಿಲ್ಲೆಗಳಲ್ಲಿ 36 ಸಾವಿರ ನಾಗರಿಕರಿಂದ ಪ್ರತಿಕ್ರಿಯೆ ಪಡೆಯಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ ಶೇ 26ರಷ್ಟು ಮಂದಿ ಸ್ಥಳೀಯ ಆಡಳಿತವು ಜಿಲ್ಲೆಯ ಕೆಲವು ಅಥವಾ ಎಲ್ಲ ನಿವಾಸಿಗಳಿಗೆ ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿವೆ ಎಂದು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಆರೋಗ್ಯ ಸಚಿವಾಲಯ, ಅಕ್ಟೋಬರ್ 8 ರಂದು ಗೋವಾದಲ್ಲಿನ ಬಾಂಬೆ ಹೈಕೋರ್ಟ್‌ನಲ್ಲಿ ’ಕೋವಿಡ್‌–19’ ಲಸಿಕೆ ಹಾಕುವುದು ಸಾಮಾಜಿಕ ಬದ್ಧತೆಯಾಗಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಅಗತ್ಯವಾಗಿದೆ’ ಎಂದು ಪ್ರಮಾಣಪತ್ರ ಸಲ್ಲಿಸಿದೆ.

’ಜವಾಬ್ದಾರಿಯುತ ನಾಗರಿಕನಾಗಿ, ಪ್ರತಿಯೊಬ್ಬ ವ್ಯಕ್ತಿ ಸಹಜವಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುಬೇಕು. ಆದರೆ, ಯಾವುದೇ ವ್ಯಕ್ತಿಗೆ ಬಲವಂತವಾಗಿ ಅವಳ/ಅವನ ಇಚ್ಛೆಗೆ ವಿರುದ್ಧವಾಗಿ ಲಸಿಕೆ ಹಾಕಿಸಲಾಗದು’ ಎಂದು ಸಮೀಕ್ಷೆಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.