ADVERTISEMENT

ಮೂವರು ಮಲೇಷ್ಯನ್ನರು ಸೇರಿ 10 ಮಹಿಳೆಯರು ಶಬರಿಮಲೆ ದೇಗುಲಕ್ಕೆ ಪ್ರವೇಶ: ಪೊಲೀಸ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 11:12 IST
Last Updated 6 ಜನವರಿ 2019, 11:12 IST
   

ತಿರುವನಂತಪುರ:ಕೇರಳದ ಶಬರಿಮಲೆ ದೇವಸ್ಥಾನವನ್ನು ತಮಿಳುನಾಡು ಮೂಲದ ಮೂವರು ಮಲೇಷ್ಯಾ ಮಹಿಳೆಯರು ಪ್ರದೇಶಿಸಿದ್ದಾರೆ. ಇದುಕೇರಳ ಪೊಲೀಸ್‌ನ ವಿಶೇಷ ಘಟಕಚಿತ್ರೀಕರಿಸಿರುವ ವಿಡಿಯೊದಲ್ಲಿದೆ. ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸುವುಕ್ಕೂ ಮೊದಲು ಇವರು ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ.

ಇಬ್ಬರು ಮಹಿಳೆಯರಾದ ಕನಕದುರ್ಗಾ ಮತ್ತು ಬಿಂದು ಅವರು ದೇಗುಲ ಪ್ರವೇಶಿಸಿದ ಮೊದಲ ಮಹಿಳೆಯರು ಎಂದು ಘೋಷಿಸಲಾಗಿತ್ತು. ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸುವ ಒಂದು ದಿನ ಮೊದಲೇ ಮೂವರು ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ.

ಸೆ.28ರಂದು ಮಹಿಳೆಯರ ದೇಗುಲ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಬಳಿಕ ಈ ಬೆಳಣಿಗೆಗಳು ನಡೆದಿದ್ದು, ಕೇರಳದಲ್ಲಿ ಆಡಳಿತ ಮತ್ತು ವಿಪಕ್ಷಗಳ ಸಮರ ಮುಂದುವರಿದಿದೆ. ಹಲವೆಡೆ ಪ್ರತಿಭಟನೆ, ಹಿಂಸಾಚಾರಗಳು ನಡೆದಿವೆ.

ADVERTISEMENT

ಜ.1ರಿಂದ ಶಬರಿಮಲೆಗೆ 50 ಮಹಿಳೆಯರು ಭೇಟಿ ನೀಡಿದ್ದಾರೆ ಎನ್ನಲಾದ ವರದಿಗಳ ಪೈಕಿ 10 ಮಹಿಳೆಯರು ಭೇಟಿ ನೀಡಿರುವುದು ದೃಢೀಕರಿಸುವ ವರದಿಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಈ ಎಲ್ಲಾ ಮಹಿಳೆರಯ ವಿವರಗಳನ್ನು ಸಂಗ್ರಹಿಸಿ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ತಿಳಿದುಬಂದಿದೆ.

ಆದಾಗ್ಯೂ, ಮಲೇಷ್ಯಾದ ಮಹಿಳೆಯರ ಭೇಟಿಯನ್ನು ದೃಢೀಕರಿಸಿದ ಪೊಲೀಸ್‌ ಮೂಲಗಳು, ಶಬರಿಮಲೆ ದರ್ಶನ ಪಡೆದಿರುವುದನ್ನು ಬಹಿರಂಗ ಪಡಿಸಲು ನಿರಾಕರಿಸಿವೆ. ಮಲೇಷ್ಯಾದ ತಮಿಳು ಸಮುದಾಯಕ್ಕೆ ಸೇರಿದ 25 ಯಾತ್ರಿಕರತಂಡದಲ್ಲಿ ಮೂವರು ಮಹಿಳೆಯರ ಹೆಸರುಗಳಿವೆ ಎಂದು ಹೇಳಿದ್ದಾರೆ ಎಂದು ದಿ.ಟೈಮ್ಸ್‌ಆಫ್‌ ಇಂಡಿಯಾ ವರದಿ ಮಾಡಿದೆ.

‘ಜ.1ರಂದು ಮಲೇಷ್ಯಾ ಮಹಿಳೆಯರು ಶಬರಿಮಲೆಗೆ ಭೇಟಿ ಮಾಡಿದ್ದಾರೆ‘
ತಮಿಳು ಮೂಲಕದ ಮೂವರು ಮಲೇಷ್ಯಾದ ಮಹಿಳೆಯರು ಜ.1ರಂದು ಶಬರಿಮಲೆಗೆ ಭೇಟಿ ನೀಡಿದ್ದರು. ಆದರೆ, ದೃಶ್ಯಗಳಲ್ಲಿ ದರ್ಶನದ ಬಳಿಕ ಹಿಂದಿರುಗುತ್ತಿರುವುದು ಇದೆ ಎಂದು ಉನ್ನತ ಪೊಲೀಸ್ ಮೂಲಗಳು ಹೇಳಿವೆ. ಮೊಬೈಲ್‌ನಲ್ಲಿ ಚಿತ್ರೀಕರಿಸಿದ 14 ಸೆಕೆಂಡ್‌ನ ವಿಡಿಯೊದಲ್ಲಿ ಮೂವರು ಮಹಿಳೆಯರು ಮುಖಕ್ಕೆ ಶಾಲುಗಳಿಂದ ಮುಚ್ಚಿಕೊಂಡಿರುವುದು ಇದೆ ಎಂದು ತಿಳಿಸಿವೆ.

ಹದಗೆಟ್ಟ ಕಾನೂನು ವ್ಯವಸ್ಥೆ: ಕೇಂದ್ರ ಸಚಿವ ರಾಥೋಡ್‌
ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತುಂಬಾ ಗಾಬರಿಗೊಳ್ಳುವಂತಿದೆ. ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ಸಂಸದ ವಿ. ಮುರಳೀಧರ ಅವರ ಮನೆಯ ಮೇಲೆ ದಾಳಿ ನಡೆದಿದೆ. ಕೇರಳ ಮುಖ್ಯಮಂತ್ರಿ ಅವರ ಏಕ ಪಕ್ಷೀಯ ಹೇಳಿಕೆಗಳಿಂದ ಪರಿಸ್ಥಿತಿ ನಿಯಂತ್ರಣ ಕಳೆದುಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ರಾಥೋಡ್‌ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.