ADVERTISEMENT

ಮಾನವ ಕಳ್ಳ ಸಾಗಣೆ: ಜಾರ್ಖಂಡ್‌ನಲ್ಲಿ 2019ರಿಂದ ಈಚೆಗೆ 1,000 ಜನರ ರಕ್ಷಣೆ

ಪಿಟಿಐ
Published 8 ಸೆಪ್ಟೆಂಬರ್ 2022, 16:34 IST
Last Updated 8 ಸೆಪ್ಟೆಂಬರ್ 2022, 16:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಂಚಿ: ಮಕ್ಕಳು ಹಾಗೂ ಯುವಕರೂ ಸೇರಿದಂತೆ ಜಾರ್ಖಂಡ್‌ನ ಒಂದು ಸಾವಿರ ಮಂದಿಯನ್ನು ದೇಶದ ವಿವಿಧ ಭಾಗಗಳಲ್ಲಿ 2019ರಿಂದ ಈಚೆಗೆ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟವರಲ್ಲಿ 10 ವರ್ಷಕ್ಕಿಂತ ಕೆಳಗಿನ 126 ಮಕ್ಕಳು, 11ರಿಂದ 14 ವರ್ಷದೊಳಗಿನ 359 ಮಕ್ಕಳು ಇದ್ದಾರೆ.

ಜಾರ್ಖಂಡ್‌ ರಾಜ್ಯ ಮಕ್ಕಳ ರಕ್ಷಣಾ ಸಮಾಜವು (ಜೆಎಸ್‌ಸಿಪಿಎಸ್‌) ಹೆಹಾಲ್‌ನಲ್ಲಿರುವ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಗಾರದಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.

ADVERTISEMENT

ಜೆಎಸ್‌ಸಿಪಿಎಸ್‌ ಜಂಟಿ ನಿರ್ದೇಶಕಿ ರಾಜೇಶ್ವರಿ ಬಿ ಅವರು, 2019ರಿಂದ ಇಲ್ಲಿಯವರೆಗೆ 996 ಮಕ್ಕಳನ್ನು ಕಳ್ಳಸಾಗಣೆದಾರರದಿಂದ ರಕ್ಷಿಸಲಾಗಿದೆ. ಪಂಚಾಯಿತಿ ಮಟ್ಟದಿಂದಲೇ ಸಮಸ್ಯೆಗೆ ಕಾರಣ ಪತ್ತೆ ಹಚ್ಚಿ, ಅದರಂತೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.