ಚಂಡೀಗಡ: ‘ಗುರುದಾಸಪುರ ಜಿಲ್ಲೆಯ ಸಮೀಪವಿರುವ ಅಂತರರಾಷ್ಟ್ರೀಯ ಗಡಿ (ಐಬಿ) ಬಳಿ 11 ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಇವುಗಳನ್ನು ಹಾಕಿರುವ ಅನುಮಾನವಿದೆ’ ಎಂದು ಪಂಜಾಬ್ ಪೊಲೀಸರು ಸೋಮವಾರ ತಿಳಿಸಿದ್ದಾರೆ.
‘ಇದೇ ತಿಂಗಳ 19ರ ರಾತ್ರಿ ಡ್ರೋನ್‌ವೊಂದು ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದುದ್ದನ್ನು ಗಮನಿಸಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಸಿಬ್ಬಂದಿ ಅದರತ್ತ ಗುಂಡಿನ ದಾಳಿ ನಡೆಸಿದ್ದರು. ಭಾನುವಾರ ಇದರ ಪತ್ತೆಕಾರ್ಯ ಆರಂಭಿಸಲಾಗಿತ್ತು. ಈ ವೇಳೆ ಅಂತರರಾಷ್ಟ್ರೀಯ ಗಡಿಯಿಂದ ಒಂದು ಕಿ.ಮೀ. ದೂರವಿರುವ ಸಲಾಚ್ ಗ್ರಾಮದ ಮೈದಾನದಲ್ಲಿ ಗ್ರೆನೇಡ್‌ಗಳು ಸಿಕ್ಕಿವೆ. ಇವುಗಳನ್ನು ಪೆಟ್ಟಿಗೆಯಲ್ಲಿ ಇಡಲಾಗಿತ್ತು’ ಎಂದು ಗುರುದಾಸಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಾಜಿಂದರ್ ಸಿಂಗ್ ಸೋಹಲ್ ಹೇಳಿದ್ದಾರೆ.
ಪಾಕಿಸ್ತಾನವು ಡ್ರೋನ್‌ಗಳ ಮೂಲಕ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾಗಿದೆ.2019ರ ಆಗಸ್ಟ್‌ನಲ್ಲಿ ಪಾಕಿಸ್ತಾನದ ಕಡೆಯಿಂದ ಬಂದಿದ್ದ ಡ್ರೋನ್‌ವೊಂದನ್ನು ಪಂಜಾಬ್‌ನ ಟಾರ್ನ್ ಟರನ್ ಜಿಲ್ಲೆಯಲ್ಲಿ ಹೊಡೆದುರುಳಿಸಲಾಗಿತ್ತು. ಅದರಿಂದ ಎಕೆ–47 ರೈಫಲ್, ಮ್ಯಾಗಜೀನ್, ಗ್ರೆನೇಡ್, ನಕಲಿ ಹಣ ವಶಪಡಿಸಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.