ADVERTISEMENT

ಪ್ರತಿದಿನ 10 ಭಾರತೀಯ ಕಾರ್ಮಿಕರ ಸಾವು

ಕೊಲ್ಲಿ ರಾಷ್ಟ್ರಗಳಲ್ಲಿನ ಮಾಹಿತಿ ಆರ್‌ಟಿಐ ಮೂಲಕ ಬಯಲು

ಪಿಟಿಐ
Published 5 ನವೆಂಬರ್ 2018, 19:57 IST
Last Updated 5 ನವೆಂಬರ್ 2018, 19:57 IST
   

ನವದೆಹಲಿ: ಕೊಲ್ಲಿ ರಾಷ್ಟ್ರಗಳಲ್ಲಿ ಪ್ರತಿದಿನ ಅಂದಾಜು 10 ಭಾರತೀಯ ಕಾರ್ಮಿಕರು ಸಾವಿಗೀಡಾಗುತ್ತಿದ್ದಾರೆ ಎಂದು ಆರ್‌ಟಿಐ ಮಾಹಿತಿ ಆಧರಿಸಿಕಾಮನ್‌ವೆಲ್ತ್‌ ಮಾನವ ಹಕ್ಕುಗಳ ಸಂಘಟನೆ ವರದಿ ಮಾಡಿದೆ.

2012ರಿಂದ 2017ರ ಅವಧಿಯಲ್ಲಿ ವಿಶ್ವದೆಲ್ಲೆಡೆಯಿಂದ ಭಾರತ ಗಳಿಸಿದ ಆದಾಯದಲ್ಲಿನ ಅರ್ಧಕ್ಕಿಂತ ಹೆಚ್ಚು ಪಾಲಿನಲ್ಲಿ ಕೊಲ್ಲಿ ರಾಷ್ಟ್ರಗಳ ಭಾರತೀಯ ಕಾರ್ಮಿಕರ ಕೊಡುಗೆ ಇದೆ. ಈ ಆದಾಯದ ಪ್ರತಿ ಲಕ್ಷ ಕೋಟಿಗೆ ಹೋಲಿಸಿದರೆ ಸರಾಸರಿ ಸಾವಿನ ಸಂಖ್ಯೆ 117 ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2012ರ ಜ.1ರಿಂದ 2018ರ ಅರ್ಧವರ್ಷದವರೆಗೆ ಬಹರೇನ್, ಒಮನ್‌, ಕತಾರ್, ಕುವೈತ್‌, ಸೌದಿ ಅರೇಬಿಯಾ ಹಾಗೂ ಅರಬ್‌ ಸಂಯುಕ್ತ ರಾಷ್ಟ್ರಗಳಲ್ಲಿ (ಯುಎಇ) ಸಾವಿಗೀಡಾಗಿರುವ ಭಾರತೀಯ ಕಾರ್ಮಿಕರ ಕುರಿತು ಮಾಹಿತಿ ನೀಡಬೇಕೆಂದುಕಾಮನ್‌ವೆಲ್ತ್‌ ಮಾನವ ಹಕ್ಕುಗಳ ಸಂಘಟನೆಯ (ಸಿಎಚ್‌ಆರ್‌ಐ) ವೆಂಕಟೇಶ್ ನಾಯಕ್ ಎನ್ನುವವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.

ADVERTISEMENT

ಯುಎಇದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೊರತುಪಡಿಸಿ ಉಳಿದ ಕಡೆಯಿಂದ ಮಾಹಿತಿ ದೊರಕಿದೆ. ಜತೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನೀಡಲಾದ ಲಿಖಿತ ಮಾಹಿತಿಗಳನ್ನೂ ಸೇರಿಸಿಕೊಂಡು ವರದಿ ಸಿದ್ಧಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.