ಎಐ
ರಾಂಚಿ: ಗೋವಾಕ್ಕೆ ಮಾನವ ಕಳ್ಳಸಾಗಣೆ ಆಗುತ್ತಿದ್ದ ಒಬ್ಬ ಬಾಲಕಿ ಸೇರಿದಂತೆ 13 ಮಕ್ಕಳನ್ನು ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ಪೊಲೀಸರು ಜಾರ್ಖಂಡ್‌ನ ರಾಂಚಿ ಬಳಿಯ ಮೂಚಿ ರೈಲು ನಿಲ್ದಾಣದಲ್ಲಿ ರಕ್ಷಿಸಿದ್ದಾರೆ.
ಈ ಮಕ್ಕಳು ಸೋಮವಾರ ರಾಂಚಿಯಿಂದ ವಾಸ್ಕೊ–ಡ–ಗಾಮಾ ವಿಶೇಷ ಎಕ್ಸ್‌ಪ್ರೆಸ್ ರೈಲಿನಲ್ಲಿ ಗೋವಾಕ್ಕೆ ತೆರಳುತ್ತಿದ್ದರು.
ಮಕ್ಕಳು ಮಾನವ ಕಳ್ಳಸಾಗಣೆ ಆಗುತ್ತಿದ್ದಾರೆ ಎಂಬ ಅನುಮಾನದ ಮೇಲೆ ಖಚಿತ ಮಾಹಿತ ಆಧಾರದ ಮೇಲೆ ಆರ್‌ಪಿಎಫ್ ಪೊಲೀಸರು ಮೂಚಿ ರೈಲು ನಿಲ್ದಾಣದ ಬಳಿ ಬೋಗಿಯನ್ನು ಪರಿಶೀಲಿಸಿದರು. ಆಗ ಮಕ್ಕಳು ಇರುವುದು ಕಂಡು ಬಂತು. ಪೊಲೀಸರ ಪ್ರಶ್ನೆಗೆ ಮಕ್ಕಳು ಸರಿಯಾಗಿ ಉತ್ತರ ನೀಡಲಿಲ್ಲ. ಹೀಗಾಗಿ ಮಕ್ಕಳನ್ನು ರಕ್ಷಿಸಿ, ಸ್ಥಳೀಯ ಮಕ್ಕಳ ರಕ್ಷಣಾ ಘಟಕದಲ್ಲಿರಿಸಲಾಗಿದೆ ಎಂದು ಆರ್‌ಪಿಎಫ್ ರಾಂಚಿ ಪೊಲೀಸರು ತಿಳಿಸಿದ್ದಾರೆ.
ನಾವು ಗೋವಾಕ್ಕೆ ಹೋಗುತ್ತಿದ್ದೇವೆ. ಅಲ್ಲಿ ಒಬ್ಬ ವ್ಯಕ್ತಿ ಬಂದು ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದಾನೆ. ನಮಗೆ ಅಷ್ಟೇ ಗೊತ್ತಿರೋದು ಎಂದು ಮಕ್ಕಳು ಹೇಳಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಜಾರ್ಖಂಡ್ ಜಿಆರ್‌ಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.