ADVERTISEMENT

ಪ್ರಜಾಪ್ರಭುತ್ವವನ್ನೇ ನಾಶಮಾಡಲಿದೆ ಸಂವಿಧಾನದ 130ನೇ ತಿದ್ದುಪಡಿ ಮಸೂದೆ: ಮಮತಾ

ಪಿಟಿಐ
Published 20 ಆಗಸ್ಟ್ 2025, 9:59 IST
Last Updated 20 ಆಗಸ್ಟ್ 2025, 9:59 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

ಕೃಪೆ: ಪಿಟಿಐ

ಕೋಲ್ಕತ್ತ: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಂವಿಧಾನ (130ನೇ ತಿದ್ದುಪಡಿ) ಮಸೂದೆ–2025 ವಿರುದ್ಧ ಪಶ್ಚಿಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ತುರ್ತುಪರಿಸ್ಥಿತಿಗಿಂತಲೂ ಕಠಿಣವಾದ ಈ ಕ್ರಮವು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಯುಗಾಂತ್ಯಕ್ಕೆ ಕಾರಣವಾಗಲಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಗಂಭೀರ ಆರೋಪಗಳನ್ನು ಎದುರಿಸಿ ಸತತ 30 ದಿನಗಳ ವರೆಗೆ ಬಂಧನಕ್ಕೊಳಗಾಗುವ ಅಥವಾ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯಗಳ ಸಚಿವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮೂರು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಇಂದು (ಬುಧವಾರ) ಲೋಕಸಭೆಯಲ್ಲಿ ಮಂಡಿಸುವುದಾಗಿ ಕೇಂದ್ರ ತಿಳಿಸಿತ್ತು.

ಈ ಕುರಿತು ಮಮತಾ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಸಂವಿಧಾನ (130ನೇ ತಿದ್ದುಪಡಿ) ಮಸೂದೆ–2025 ಅನ್ನು ಖಂಡಿಸುತ್ತೇನೆ. ಇದು ತುರ್ತುಪರಿಸ್ಥಿತಿಗಿಂತಲೂ ಕಠಿಣವಾದ ಕ್ರಮವಾಗಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಾಶ್ವತವಾಗಿ ನಾಶಮಾಡುವ ಹೆಜ್ಜೆಯಾಗಲಿದೆ. ಇದು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಮರಣ ಮೃದಂಗವಾಗಲಿದೆ' ಎಂದು ಪ್ರತಿಪಾದಿಸಿದ್ದಾರೆ.

'ಒಬ್ಬ ವ್ಯಕ್ತಿ – ಒಂದು ಪಕ್ಷ – ಒಂದು ಸರ್ಕಾರ' ವ್ಯಸ್ಥೆಯನ್ನು ಸಂಘಟಿಸುವುದೇ ಈ ತಿದ್ದುಪಡಿಯ ಉದ್ದೇಶ. ಇದು ಸಂವಿಧಾನದ ಮೂಲ ರಚನೆಯನ್ನು ನಾಶ ಮಾಡಲಿದೆ ಎಂದೂ ಆರೋಪಿಸಿದ್ದಾರೆ.

ಹಾಗೆಯೇ, 'ಏನೇ ಆಗಲಿ, ಪ್ರಜಾಪ್ರಭುತ್ವನ್ನು ರಕ್ಷಿಸುವ ಸಲುವಾಗಿ ಈ ಮಸೂದೆ ಜಾರಿಯಾಗದಂತೆ ತಡೆಯಬೇಕು' ಎಂದು ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.