ಪ್ರಾತಿನಿಧಿಕ ಚಿತ್ರ
ಸಾರಣ್(ಬಿಹಾರ) : ಆರ್ಕೆಸ್ಟ್ರಾಗಳಲ್ಲಿ ನೃತ್ಯ ಮಾಡಲು ಬಲವಂತವಾಗಿ ಇರಿಸಿಕೊಂಡಿದ್ದ 17 ಬಾಲಕಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಬಿಹಾರದ ಸಾರಣ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ, ಐವರು ಆರ್ಕೆಸ್ಟ್ರಾ ನಿರ್ವಾಹಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಕ್ಷಿಸಲಾದ ಬಾಲಕಿಯರ ಪೈಕಿ ಪಶ್ಚಿಮ ಬಂಗಾಳದ ಎಂಟು ಮಂದಿ, ಒಡಿಶಾದ ನಾಲ್ವರು, ಜಾರ್ಖಂಡ್‌ನ ಇಬ್ಬರು ಹಾಗೂ ದೆಹಲಿ ಮತ್ತು ಬಿಹಾರದ ತಲಾ ಒಬ್ಬರು ಇದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಾರಣ್ ಎಸ್ಪಿ ಕುಮಾರ್ ಆಶಿಶ್ ಅವರು, ‘ಗುರುವಾರ ಮತ್ತು ಶುಕ್ರವಾರ ಕಾರ್ಯಾಚರಣೆ ನಡೆಸಲಾಯಿತು. ಬಾಲಕಿಯರ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ’ ಎಂದರು.
2024ರ ಮೇ ತಿಂಗಳಿಂದ ಈವರೆಗೆ, ಆರ್ಕೆಸ್ಟ್ರಾದಲ್ಲಿದ್ದ 162 ಬಾಲಕಿಯರನ್ನು ರಕ್ಷಿಸಲಾಗಿದ್ದು, 56 ಜನರ ವಿರುದ್ಧ 21 ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.