ADVERTISEMENT

ಮಿಜೋರಾಂ ವಿಧಾನಸಭಾ ಚುನಾವಣೆ | 174 ನಾಮಪತ್ರಗಳ ಸಲ್ಲಿಕೆ

ಪಿಟಿಐ
Published 21 ಅಕ್ಟೋಬರ್ 2023, 6:37 IST
Last Updated 21 ಅಕ್ಟೋಬರ್ 2023, 6:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   ಕಡತ ಚಿತ್ರ

ಐಜೋಲ್: ಮಿಜೋರಾಂ ವಿಧಾನಸಭಾ ಚುನಾವಣೆಗೆ ನ. 7ರಂದು ಚುನಾವಣೆ ನಡೆಯಲಿದ್ದು, 16 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

40 ಸದಸ್ಯ ಬಲದ ಮೀಜೋರಾಂ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮುಗಿದಿದ್ದು, ಅ. 23ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್‌ (ಎಂಎನ್‌ಎಫ್‌), ವಿರೋಧಪಕ್ಷವಾಗಿರುವ ಜೋರಾಂ ಪೀಪಲ್ಸ್ ಮೂಮೆಂಟ್ (ಝಡ್‌ಪಿಎಂ) ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಎಂಎನ್‌ಎಫ್‌ ಎಲ್ಲಾ 40 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಲ್ಲಿ 25 ಜನ ಹಾಲಿ ಶಾಸಕರೂ ಇದ್ದಾರೆ. ಝಡ್‌ಪಿಎಂನ 6 ಹಾಲಿ ಶಾಸಕರನ್ನು ಒಳಗೊಂಡು 40 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಬಿಜೆಪಿಯ 23, ಆಮ್‌ ಆದ್ಮಿ ಪಕ್ಷದ 4 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರೊಂದಿಗೆ 27 ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಡಿ. 3ರಂದು ಮತ ಎಣಿಕೆ ನಡೆಯಲಿದೆ. ಕ್ರೈಸ್ತ ಸಮುದಾಯದವರೇ ಹೆಚ್ಚಿನ ಸಂಖ್ಯೆ (ಶೇ 87)ಯಲ್ಲಿರುವ ಮಿಜೋರಂನಲ್ಲಿ ತಮ ಎಣಿಕೆಗೆ ನಿಗದಿಯಾಗಿರುವ ದಿನ ಪವಿತ್ರ ಭಾನುವಾರವಾದ್ದರಿಂದ, ಮುಂದೂಡಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು, ಚರ್ಚ್‌ಗಳು, ನಾಗರಿಕ ಸಮಿತಿಗಳು, ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ. 

ರಾಜ್ಯದಲ್ಲಿ ಒಟ್ಟು 8.56 ಲಕ್ಷ ಮತದಾರರು ಇದ್ದು, ಇವರಲ್ಲಿ 4.38 ಲಕ್ಷ ಮಹಿಳಾ ಮತದಾರರು. 2018ರ ಚುನಾವಣೆಯಲ್ಲಿ ಎಂಎನ್‌ಎಫ್‌ 26 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಝಡ್‌ಪಿಎಂ 8, ಕಾಂಗ್ರೆಸ್‌ 5 ಮತ್ತು ಬಿಜೆಪಿ ಒಂದು ಸ್ಥಾನಗಳಲ್ಲಿ ಗೆದ್ದಿತ್ತು. ನಂತರ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಎಂಎನ್‌ಎಫ್‌ 2 ಸ್ಥಾನಗಳನ್ನು ಗೆದ್ದುಕೊಂಡು ಒಟ್ಟು ಸ್ಥಾನಗಳನ್ನು 28ಕ್ಕೆ ಹೆಚ್ಚಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.