ADVERTISEMENT

ಅಕ್ರಮವಾಗಿ ಸಿಡಿಆರ್‌ ಮಾರಾಟ: ಇಬ್ಬರ ಬಂಧನ

ಮುಂಬೈ ಗೊರೆಗಾಂವ್‌ನಲ್ಲಿ ಪೊಲೀಸರ ಕಾರ್ಯಾಚರಣೆ

ಪಿಟಿಐ
Published 8 ಫೆಬ್ರುವರಿ 2021, 9:04 IST
Last Updated 8 ಫೆಬ್ರುವರಿ 2021, 9:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಇನ್ನೂರು ಮಂದಿಯ ಬ್ಯಾಂಕ್ ಖಾತೆಯ ವಿವಿರ ಮತ್ತು ಮೊಬೈಕ್ ಕರೆಯ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಗೊರೆಗಾಂವ್‌ನಲ್ಲಿ ಮುಂಬೈ ಪೊಲೀಸರು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಶೈಲೇಶ್ ಮಂಜ್ರೇಕರ್ ಮತ್ತು ರಾಜೇಂದ್ರ ಸಾಹು ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ಶನಿವಾರ ರಾತ್ರಿ ಮುಂಬೈ ಕ್ರೈ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಆರು ಮೊಬೈಲ್‌ ಫೋನ್‌ಗಳು, ಇನ್ನೂರು ಮಂದಿಯ ಕಾಲ್‌ ಡೀಟೇಲ್ ರೆಕಾರ್ಡ್‌(ಸಿಡಿಆರ್‌)ಗಳಿರುವ ಒಂದು ಪೆನ್‌ ಡ್ರೈವ್, ಮುದ್ರಿತ ಕಾಲ್‌ರೆಕಾರ್ಡ್‌ ದಾಖಲೆಗಳು, ಮೂರು ಲ್ಯಾಪ್‌ಟಾಪ್‌ಗಳು, ಐಪಾಡ್ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ನಿಯಮಗಳ ಪ್ರಕಾರ, ಪೊಲೀಸ್ ಹಾಗೂ ಕೆಲವು ಅಧಿಕೃತ ಇಲಾಖೆಗಳಿಗೆ ಮಾತ್ರ ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿಯೊಂದಿಗೆ ಮೊಬೈಲ್ ಫೋನ್ ಕರೆ ಡೇಟಾ ದಾಖಲೆಗಳನ್ನು ಪಡೆಯಲು ಅನುಮತಿ ಇದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ಗೊರೆಗಾಂವ್‌ನಲ್ಲಿ ಖಾಸಗಿ ಗುಪ್ತಚರ ಸಂಸ್ಥೆ ನಡೆಸುತ್ತಿದ್ದೇವೆ ಎಂದು ಬಂಧಿತ ಆರೋಪಿಗಳು ಹೇಳಿಕೊಂಡಿದ್ದಾರೆಂದು ಅಪರಾಧ ವಿಭಾಗಕ್ಕೆ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.