ADVERTISEMENT

ಇಬ್ಬರು ಶಂಕಿತ ಉಗ್ರಗಾಮಿ ಸಹಚರರ ಬಂಧನ

ಪಿಟಿಐ
Published 7 ಮಾರ್ಚ್ 2023, 14:13 IST
Last Updated 7 ಮಾರ್ಚ್ 2023, 14:13 IST
.
.   

ಶ್ರೀನಗರ (ಪಿಟಿಐ): ಲಷ್ಕರ್‌ ಎ ತೋಯ್ಬಾದ ಇಬ್ಬರು ಶಂಕಿತ ಉಗ್ರಗಾಮಿ ಸಹಚರರನ್ನು ಜಮ್ಮು –ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಉತ್ತರ ಕಾಶ್ಮೀರದ ಮೊಂಚಖುದ್‌ ಕುಂಜರ್‌ ಗ್ರಾಮದಲ್ಲಿ ಉಗ್ರರು ಇರುವ ಬಗ್ಗೆ ನಿಖರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಪೊಲೀಸ್‌ ವಕ್ತಾರರೊಬ್ಬರು ಹೇಳಿದ್ದಾರೆ.

ಬಂಧಿತರನ್ನು ಖುರ್ಷಿದ್‌ ಅಹಮದ್‌ ಖಾನ್‌ ಮತ್ತು ರಿಯಾಜ್‌ ಅಹಮದ್‌ ಖಾನ್‌ ಎಂದು ಗುರುತಿಸಲಾಗಿದ್ದು, ಇಬ್ಬರೂ ಝಂಡ್ಪಾಲ್ ಕುಂಜರ್ ಪ್ರದೇಶದ ನಿವಾಸಿಗಳಾಗಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.