ADVERTISEMENT

2,988 ಔಷಧಿಗಳಲ್ಲಿ ಗುಣಮಟ್ಟವಿಲ್ಲ; 282 ಔಷಧಿಗಳು ನಕಲಿ: ಸಚಿವ

ಪಿಟಿಐ
Published 3 ಡಿಸೆಂಬರ್ 2024, 16:22 IST
Last Updated 3 ಡಿಸೆಂಬರ್ 2024, 16:22 IST
<div class="paragraphs"><p>ಔಷಧಿ (ಪ್ರಾತಿನಿಧಿಕ ಚಿತ್ರ)</p></div>

ಔಷಧಿ (ಪ್ರಾತಿನಿಧಿಕ ಚಿತ್ರ)

   

ಗೆಟ್ಟಿ ಇಮೇಜಸ್

ನವದೆಹಲಿ: ದೇಶದಲ್ಲಿ ಮಾರಾಟವಾಗುತ್ತಿರುವ 2,988 ಔಷಧ ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಮತ್ತು 282 ಔಷಧಿಗಳು ಕಲಬೆರಕೆ ಅಥವಾ ನಕಲಿಯಾಗಿರುವುದು ಪರೀಕ್ಷೆಯಲ್ಲಿ ಕಂಡುಬಂದಿದೆ ಎಂದು ಆರೋಗ್ಯ ಸಚಿವರು ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ADVERTISEMENT

2023ರ ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗಿನ ಅವಧಿಯಲ್ಲಿ 1,06,150 ಔಷಧ ಮಾದರಿಗಳನ್ನು ಪರೀಕ್ಷಿಸಲಾಗಿದೆ. ನಕಲಿ ಅಥವಾ ಕಲಬೆರಕೆ ಔಷಧಗಳ ತಯಾರಿಕೆ, ಮಾರಾಟ ಮತ್ತು ವಿತರಣೆಗಾಗಿ 604 ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ನಕಲಿ, ಕಲಬೆರಕೆ ಹಾಗೂ ಪ್ರಮಾಣಿತವಲ್ಲದ ಔಷಧಗಳ ಮಾರಾಟ ತಡೆಯುವ ಸಲುವಾಗಿ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ರಾಜ್ಯ ಔಷಧ ನಿಯಂತ್ರಕರೊಂದಿಗೆ 2022ರ ಡಿಸೆಂಬರ್‌ನಿಂದ ಔಷಧ ತಯಾರಿಕಾ ಸಂಸ್ಥೆಗಳ ಅಪಾಯ-ಆಧಾರಿತ ತಪಾಸಣೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.