ADVERTISEMENT

ಮೂತ್ರ ಕುಡಿಸಿದ್ದ ಆರೋಪ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 16:31 IST
Last Updated 29 ಜುಲೈ 2023, 16:31 IST
   

ಕಾಸಗಂಜ್ (ಉತ್ತರಪ್ರದೇಶ): ವ್ಯಕ್ತಿಯ ತಲೆ ಬೋಳಿಸಿ, ಆತನಿಗೆ ಮೂತ್ರ ಕುಡಿಸಿದ್ದ ಆರೋಪದ ಮೇಲೆ ಮೂವರು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಐದು ಜನರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಜುಲೈ 26ರಂದು ನಡೆದಿದ್ದ ಘಟನೆಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲೇ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ರಫೀಕ್ ಉಲ್‌ ಎಂಬಾತ ದೂರು ನೀಡಿದ್ದಾರೆ. ಬಂಧಿತರ ಪೈಕಿ ಒಬ್ಬ ಲಿಂಗತ್ವ ಅಲ್ಪಸಂಖ್ಯಾತನ ಮನೆಯಲ್ಲಿ ರಫೀಕ್‌ ಅಡುಗೆ ಕೆಲಸಕ್ಕಿದ್ದರು. ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಾಗ, ಆರೋಪಿಗಳು ಆತನಿಗೆ ಹೊಡೆದು, ತಲೆ ಬೋಳಿಸಿ ನಂತರ ಮೂತ್ರ ಕುಡಿಸಿದ್ದಾರೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.