ADVERTISEMENT

ಇಟಲಿಯಲ್ಲಿ 3 ಭಾರತೀಯ ಸಂಗೀತಗಾರರಿಂದ ಕಛೇರಿ

ಪಿಟಿಐ
Published 12 ನವೆಂಬರ್ 2023, 14:45 IST
Last Updated 12 ನವೆಂಬರ್ 2023, 14:45 IST
   

ಕೋಲ್ಕತ್ತ: ದೀಪಾವಳಿ ಪ್ರಯುಕ್ತ ಮೂವರು ಭಾರತೀಯ ಶಾಸ್ತ್ರೀಯ ಸಂಗೀತಗಾರರು ಭಾನುವಾರ ಇಟಲಿಯ ಐತಿಹಾಸಿಕ ಕ್ವಿರಿನಾಲೆ ಅರಮನೆಯಲ್ಲಿ ಸಂಗೀತ ಕಛೇರಿ ನಡೆಸಿ ಕೊಡುವ ಮೂಲಕ, ಗಮನ ಸೆಳೆದಿದ್ದಾರೆ.

ಕೋಲ್ಕತ್ತ ಮೂಲದ ಶಾಸ್ತ್ರೀಯ ಗಾಯಕ ಸುಪ್ರಿಯೋ ದತ್ತಾ, ಸರೋದ್‌ ವಾದಕ ಪಾರ್ಥೊ ಸಾರಥಿ ಹಾಗೂ ತಬಲಾ ವಾದಕ ಸಂಜು ಸಹಾಯ್ ಅವರು ಇಟಲಿ ಅಧ್ಯಕ್ಷರ ಅಧಿಕೃತ ನಿವಾಸ ಪೌಲ್‌ ಚಾಪೆಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

‘ಇದೊಂದು ಮಹತ್ವದ ಕಾರ್ಯಕ್ರಮವಾಗಿದ್ದು, ಇಂಥ ಸ್ಥಳದಲ್ಲಿ ಪ್ರದರ್ಶನ ನೀಡಲು ಭಾರತದ ಕಲಾವಿದರನ್ನು ಪ್ರಥಮಬಾರಿಗೆ ಆಹ್ವಾನಿಸಲಾಗಿದೆ’ ಎಂದು ಜಾಲತಾಣದಲ್ಲಿ ವಿವರಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.