
ಪ್ರಜಾವಾಣಿ ವಾರ್ತೆ
ಬಿಜಾಪುರ (ಪಿಟಿಐ): ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 34 ನಕ್ಸಲರು ಮಂಗಳವಾರ ಶರಣಾಗಿದ್ದಾರೆ. ಈ ಪೈಕಿ 26 ಮಂದಿಯ ಸುಳಿವು ನೀಡಿದವರಿಗೆ ಒಟ್ಟು ₹84 ಲಕ್ಷ ಬಹುಮಾನ ಘೋಷಿಸಲಾಗಿತ್ತು.
‘ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಆರಂಭಿಸಿದ ಪುನರ್ವಸತಿ ಯೋಜನೆಯಡಿ ಏಳು ಮಂದಿ ಮಹಿಳೆಯರು ಸೇರಿದಂತೆ 34 ನಕ್ಸಲರು ಶರಣಾಗಿದ್ದಾರೆ’ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ತಿಳಿಸಿದರು.
ಶರಣಾದವರಲ್ಲಿ ಪಂಡ್ರು ಪೂನೆಮ್ (45), ರುಕ್ನಿ ಹೇಮ್ಲಾ(25), ದೇವ ಉಯ್ಕಾ (22), ರಾಮ್‌ಲಾಲ್ ಪೋಯಮ್ (27), ಮೋಟು ಪೂನೆಮ್ (21) ಪ್ರಮುಖರು. ಇವರ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.