ADVERTISEMENT

ಜೆಎನ್‌ಯು ಹಿಂಸಾಚಾರ: ವಾಟ್ಸ್ಆ್ಯಪ್ ಗುಂಪಿನ 37 ಜನರ ಗುರುತು ಪತ್ತೆ

ಜೆಎನ್‌ಯು ದಾಂದಲೆಯ ಮುನ್ನಾ ದಿನ ರೂಪುಗೊಂಡಿದ್ದ ಗುಂಪು

ಪಿಟಿಐ
Published 11 ಜನವರಿ 2020, 19:00 IST
Last Updated 11 ಜನವರಿ 2020, 19:00 IST
ದೆಹಲಿಯಲ್ಲಿ ಆಯಿಷಿ ಅವರ ಆರೋಗ್ಯ ವಿಚಾರಿಸಿದ ಕೇರಳ ಸಿ.ಎಂ ಪಿಣರಾಯಿ ವಿಜಯನ್
ದೆಹಲಿಯಲ್ಲಿ ಆಯಿಷಿ ಅವರ ಆರೋಗ್ಯ ವಿಚಾರಿಸಿದ ಕೇರಳ ಸಿ.ಎಂ ಪಿಣರಾಯಿ ವಿಜಯನ್   

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಮುಸುಕುಧಾರಿಯಾಗಿದ್ದವರು ಇದೇ 5ರಂದುನಡೆಸಿದ ದಾಂದಲೆಗೆ ಸಂಬಂಧಿಸಿ‘ಯೂನಿಟಿ ಅಗೇನೆಸ್ಟ್‌ ಲೆಫ್ಟ್‌’ ವ್ಯಾಟ್ಸ್‌ಆ್ಯಪ್‌ ಗುಂಪಿನ 37 ಮಂದಿಯನ್ನು ಪತ್ತೆ ಹಚ್ಚಲಾಗಿದೆ ಎಂದು ದೆಹಲಿ ಪೊಲೀಸರ ವಿಶೇಷ ತನಿಖಾ ತಂಡ ಹೇಳಿದೆ.

ಅಂದು ರಾತ್ರಿ ನಡೆದ ದಾಂದಲೆಯ ತಯಾರಿಗಾಗಿ ಮುನ್ನಾ ದಿನ ರೂಪುಗೊಂಡಿದೆ ಎನ್ನಲಾದ ವ್ಯಾಟ್ಸ್‌ಆ್ಯಪ್‌ ಗುಂಪಿನ ಸುಮಾರು 60 ಸದಸ್ಯರಲ್ಲಿ 37 ಮಂದಿಯನ್ನು ಪತ್ತೆ ಹಚ್ಚಿದ್ದು, ಇವರಲ್ಲಿ 10 ಮಂದಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲ. ಪತ್ತೆಯಾದವರಲ್ಲಿ ಸೆಮಿಸ್ಟರ್‌ಗೆ ನೋಂದಣಿ ಪ್ರಕ್ರಿಯೆಯ ಪರ ಇದ್ದರು ಎಂದಿದ್ದಾರೆ.

ಜೆಎನ್‌ಯುನಲ್ಲಿ ಭಾನುವಾರ ನಡೆದ ಘಟನಾವಳಿಗಳಲ್ಲಿ ಎಡಪಂಥೀಯ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಹೊರಗಿನವರ ಸಹಾಯ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ನೀಡಿದ್ದಾರೆ.

ADVERTISEMENT

ಘಟನೆ ಬಳಿಕ ಇದೇ ಮೊದಲ ಬಾರಿಗೆ ಜೆಎನ್‌ಯುನ ಕುಲಪತಿ ಎಂ.ಜಗದೀಶ್‌ ಕುಮಾರ್‌ ಅವರು ವಿದ್ಯಾರ್ಥಿಗಳೊಂದಿಗೆ ಶನಿವಾರ ಬೆಳಿಗ್ಗೆ ಸಭೆ ನಡೆಸಿದ್ದಾರೆ.‌

‘ಹಾಸ್ಟೆಲ್‌ಗಳಲ್ಲಿ ಹೊರಗಿನವರು ಉಳಿದುಕೊಂಡಿದ್ದಾರೆ. ಅವರೇ ಹಿಂಸಾಚಾರದಲ್ಲಿ ಭಾಗಿಯಾಗಿರಬಹುದು’ ಎಂದು ಕುಲ‍ಪತಿ ಆರೋಪಿಸಿದ್ದಾರೆ.

ಅಕ್ರಮವಾಗಿ ಹಾಸ್ಟೆಲ್‌ಗಳಲ್ಲಿ ತಂಗಿರುವವರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಲು ಐವರು ಸದಸ್ಯರ ತಂಡವನ್ನುವಿಶ್ವವಿದ್ಯಾಲಯ ಆಡಳಿತ ಮಂಡಳಿ ರಚಿಸಿದೆ.

ಭಯೋತ್ಪಾದಕ ಎಡಪಂಥೀಯರ ಕೃತ್ಯ: ‘ಜೆಎನ್‌ಯುನಲ್ಲಿ ನಡೆದ ಹಿಂಸಾಚಾರವು, ಅಲ್ಪಸಂಖ್ಯೆಯಲ್ಲಿರುವ ‘ಭಯೋತ್ಪಾದಕ ಎಡಪಂಥೀಯ’ ವಿದ್ಯಾರ್ಥಿಗಳ ಕೃತ್ಯವಾಗಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್ ಅವರು ಆರೋಪಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.