ADVERTISEMENT

ಅರುಣಾಚಲ ಪ್ರದೇಶ: ಕಾಂಗ್ರೆಸ್‌, ಎನ್‌ಪಿಪಿಯ ನಾಲ್ವರು ಶಾಸಕರು ಬಿಜೆಪಿ ಸೇರ್ಪಡೆ

ಪಿಟಿಐ
Published 25 ಫೆಬ್ರುವರಿ 2024, 10:10 IST
Last Updated 25 ಫೆಬ್ರುವರಿ 2024, 10:10 IST
<div class="paragraphs"><p> ಬಿಜೆಪಿ</p></div>

ಬಿಜೆಪಿ

   

ಇಟಾನಗರ: ಲೋಕಸಭೆ ಚುನಾವಣೆ ಬೆನ್ನಲೇ ಅರುಣಾಚಲ ಪ್ರದೇಶದಲ್ಲಿ ನಾಲ್ವರು ಶಾಸಕರು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ.

ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಪಿಪಿಯ ತಲಾ ಇಬ್ಬರು ಶಾಸಕರು ಬಿಜೆಪಿ ಸೇರಿದರು. ಈ ವೇಳೆ ಮುಖ್ಯಮಂತ್ರಿ ಖಂಡು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿಯುರಾಮ್ ವಾಹ್ಗೆ ಇದ್ದರು. 

ADVERTISEMENT

ಅರುಣಾಚಲ ವಿಧಾನಸಭೆಯು 60 ಸ್ಥಾನಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನು ಅನೇಕರು ಬಿಜೆಪಿ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.