ADVERTISEMENT

2024ರ ವೇಳೆಗೆ ವಿಮಾನ ಪ್ರಯಾಣಿಕರ ಸಂಖ್ಯೆ 40 ಕೋಟಿಗೆ ಹೆಚ್ಚಳ: ಸಿಂಧಿಯಾ

ಪಿಟಿಐ
Published 23 ಮಾರ್ಚ್ 2022, 14:22 IST
Last Updated 23 ಮಾರ್ಚ್ 2022, 14:22 IST
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ   

ನವದೆಹಲಿ: ದೇಶದ ವಿಮಾನಯಾನ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, 2023–24ರ ವೇಳೆಗೆ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ 40 ಕೋಟಿಗೆ ಹೆಚ್ಚುವ ವಿಶ್ವಾಸ ಇದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ವಿಷಯ ತಿಳಿಸಿದ ಅವರು, ‘ಕಳೆದ ಏಳು ದಿನಗಳ ಅವಧಿಯಲ್ಲಿ ಪ್ರತಿದಿನ 3.82 ಲಕ್ಷ ಜನರು ವಿಮಾನಗಳ ಮೂಲಕ ಪ್ರಯಾಣಿಸಿದ್ದು, ಈ ಸಂಖ್ಯೆ ಬರುವ ದಿನಗಳಲ್ಲಿ ಹೆಚ್ಚಲಿದೆ’ ಎಂದರು.

‘2018–19ನೇ ಸಾಲಿನಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ 14.50 ಕೋಟಿ ಇತ್ತು. ಕೋವಿಡ್‌ ಪಿಡುಗಿನ ಕಾರಣದಿಂದಾಗಿ 2021ರಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ 8.38 ಕೋಟಿಗೆ ಕುಸಿಯಿತು’ ಎಂದು ಅವರು ಸದನಕ್ಕೆ ವಿವರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.