ADVERTISEMENT

ಗೋವಾ: ಶೇ 44 ಸಚಿವರ ಮೇಲೆ ಅಪರಾಧ ಪ್ರಕರಣ

ಪಿಟಿಐ
Published 29 ಮಾರ್ಚ್ 2022, 20:42 IST
Last Updated 29 ಮಾರ್ಚ್ 2022, 20:42 IST
   

ನವದೆಹಲಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗೋವಾ ಸಚಿವ ಸಂಪುಟದ ಶೇ 44ರಷ್ಟು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಇತರ ಎಂಟು ಸಚಿವರು ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಸಚಿವರ ಪೈಕಿ ಶೇ 33ರಷ್ಟು ಜನರು ತಮ್ಮ ವಿರುದ್ಧ ಗಂಭೀರವಾದ ಕ್ರಿಮಿನಲ್ ಆರೋಪಗಳಿವೆ ಎಂದು ಪ್ರಕಟಿಸಿದ್ದಾರೆ.

ಕ್ರಿಮಿನಲ್ ಅಪರಾಧ ಪ್ರಕರಣಗಳಿಗೆ ಐದು ವರ್ಷ ಹಾಗೂ ಅದಕ್ಕೂ ಹೆಚ್ಚು ಅವಧಿಯ ಜೈಲುಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ADVERTISEMENT

ಸಚಿವರ ಪೈಕಿ ಪಣಜಿ ಕ್ಷೇತ್ರದಿಂದ ಆಯ್ಕೆಯಾಗಿರುವ ಅತಾನಾಸಿಯೊ ಮೋನಸೆರಟೆ ಅವರ ಬಳಿ ಅತ್ಯಧಿಕ ಅಂದರೆ, ₹48.48 ಕೋಟಿ ಆಸ್ತಿ ಇದೆ. ಗೋವಿಂದ ಗೌಡೆ ಅವರು ಅತಿ ಕಡಿಮೆ (₹2.67 ಕೋಟಿ) ಆಸ್ತಿ ಹೊಂದಿದ್ದಾರೆ.

ಎಂಟು ಸಚಿವರು ಸಾಲಗಾರರು ಎಂದು ಘೋಷಿಸಿಕೊಂಡಿದ್ದಾರೆ. ಈ ಪೈಕಿ ನಿಲೇಶ್ ಅವರು
ಅತಿಹೆಚ್ಚು (₹11.97 ಕೋಟಿ) ಸಾಲ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.