ADVERTISEMENT

ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಐದು ಮಕ್ಕಳಿಗೆ ಗಾಯ

ಪಿಟಿಐ
Published 19 ಜೂನ್ 2023, 9:44 IST
Last Updated 19 ಜೂನ್ 2023, 9:44 IST
ಕಚ್ಚಾ ಬಾಂಬ್‌ (ಪ್ರಾತಿನಿಧಿಕ ಚಿತ್ರ)
ಕಚ್ಚಾ ಬಾಂಬ್‌ (ಪ್ರಾತಿನಿಧಿಕ ಚಿತ್ರ)   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಇಂದು (ಸೋಮವಾರ) ಸಂಭವಿಸಿದ ಕಚ್ಚಾ ಬಾಂಬ್‌ ಸ್ಫೋಟದಲ್ಲಿ 7 ರಿಂದ 11 ವರ್ಷ ವಯಸ್ಸಿನ ಐದು ಮಕ್ಕಳು ಗಾಯಗೊಂಡಿದ್ದಾರೆ.

ಜಂಗಿಪುರ್‌ನ ಮಥ್‌ಪರಾದಲ್ಲಿರುವ ಮಾವಿನ ತೋಪಿನಲ್ಲಿ ಬೆಳಗ್ಗೆ 11ರ ಸುಮಾರಿಗೆ ಈ ಘಟನೆ ವರದಿಯಾಗಿದೆ. ದುಂಡಗಿನ ಆಕಾರದಲ್ಲಿದ್ದ ಕಚ್ಚಾ ಬಾಂಬ್‌ಗಳನ್ನು ಚೆಂಡುಗಳೆಂದು ತಪ್ಪಾಗಿ ಭಾವಿಸಿದ್ದ ಮಕ್ಕಳು ಫುಟ್‌ಬಾಲ್‌ ರೀತಿ ಆಡಲಾರಂಭಿಸಿದ್ದರು. ಈ ವೇಳೆ ಒಂದು ಬಾಂಬ್‌ ಸ್ಫೋಟಗೊಂಡಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಾಳು ಮಕ್ಕಳನ್ನು ಆರ್ಯನ್‌ ಶೇಖ್‌ (8), ದಾವುದ್‌ ಶೇಖ್‌ (10), ಅಸಾದುಲ್‌ ಶೇಖ್‌ (7), ಸುವಾನ್‌ ಶೇಖ್‌ (11), ಮತ್ತು ಇಮ್ರಾನ್‌ ಶೇಖ್‌ (9) ಎಂದು ಗುರುತಿಸಲಾಗಿದೆ. ಎಲ್ಲರನ್ನೂ ಜಂಗಿಪುರ್‌ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಇನ್ನಷ್ಟೇ ಬಂಧಿಸಬೇಕಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.