ADVERTISEMENT

ಹಿಮಾಚಲ ಪ್ರದೇಶ | ಮಳೆ ಸಂಬಂಧಿತ ಅವಘಡಗಳಲ್ಲಿ 56 ಮಂದಿ ಸಾವು

ಪಿಟಿಐ
Published 28 ಜುಲೈ 2024, 6:46 IST
Last Updated 28 ಜುಲೈ 2024, 6:46 IST
<div class="paragraphs"><p>ಹಿಮಾಚಲ ಪ್ರದೇಶ</p></div>

ಹಿಮಾಚಲ ಪ್ರದೇಶ

   

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್‌ ಪ್ರವೇಶವಾದಾಗಿನಿಂದ ಈವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ 56 ಜನರು ಮೃತಪಟ್ಟಿದ್ದಾರೆ. ಸುಮಾರು ₹410 ಕೋಟಿ ಮೌಲ್ಯದ ಆಸ್ತಿ–ಪಾಸ್ತಿ ನಷ್ಟವಾಗಿದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

21 ಜನರು ಎತ್ತರದ ಪ್ರದೇಶಗಳಿಂದ ಬಿದ್ದು, 18 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹಾವು ಕಡಿತ ಮತ್ತು ವಿದ್ಯುತ್‌ ಸ್ಪರ್ಶ ಅವಘಡಗಳಲ್ಲಿ ತಲಾ ಎಂಟು ಮಂದಿ ಹಾಗೂ ಒಬ್ಬರು ಪ್ರವಾಹದಲ್ಲಿ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಭೂಕುಸಿತ ಅಥವಾ ಮೇಘಸ್ಫೋಟದಲ್ಲಿ ಯಾವುದೇ ಸಾವಿನ ವರದಿಯಾಗಿಲ್ಲ ಎಂದು ಕೇಂದ್ರ ಮಾಹಿತಿ ನೀಡಿದೆ.

ADVERTISEMENT

ಮಳೆಯಿಂದಾಗಿ ಸುಮಾರು 100 ಮನೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ₹172 ಕೋಟಿ ಹಾಗೂ ತೋಟಗಾರಿಕಾ ಇಲಾಖೆಗೆ ₹139 ಕೋಟಿ ನಷ್ಟವಾಗಿದೆ ಎಂದು ಕೇಂದ್ರ ತಿಳಿಸಿದೆ.

ರಾಜ್ಯದ 8 ಜಿಲ್ಲೆಗಳಲ್ಲಿ ಜುಲೈ 31ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಶಿಮ್ಲಾ ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಗಳಿಗೆ ‘ಯೆಲ್ಲೊ’ ಅಲರ್ಟ್‌ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.