ADVERTISEMENT

ತಮಿಳುನಾಡು | ಹಿಜಾಬ್‌ ತೆಗೆಯಲು ಬಲವಂತ: 6 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 3:18 IST
Last Updated 31 ಮಾರ್ಚ್ 2023, 3:18 IST
   

ವೆಲ್ಲೂರು: ಇಲ್ಲಿನ ವೆಲ್ಲೂರು ಕೋಟೆ ಪ್ರವೇಶಿಸುತ್ತಿದ್ದ ಮಹಿಳೆಯೊಬ್ಬರನ್ನು ತಡೆದು ಬಲವಂತವಾಗಿ ಹಿಜಾಬ್‌ ತೆಗಿಸಿ, ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ 6 ಮಂದಿಯ ಪೈಕಿ ಓರ್ವ ಬಾಲಪರಾಧಿಯೂ ಇದ್ದು, ಆತನನ್ನು ಮನಪರಿವರ್ತನಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ಇಮ್ರಾನ್ ಪಾಷ (22), ಅಶ್ರಫ್‌ ಬಾಷ (20), ಮೊಹಮ್ಮದ್‌ ಫೈಸಲ್‌ (23), ಸಂತೋಷ್‌ (23), ಇಬ್ರಾಹಿಂ ಬಾಷ (24), ಪ್ರಶಾಂತ್‌ (20) ಬಂಧಿತರು.

ADVERTISEMENT

ಬಂಧಿತ ಯುವಕರ ಪೈಕಿ ಬಹುತೇಕರು ಆಟೋ ಚಾಲಕರಾಗಿದ್ದು, ಕೋಟೆಗೆ ಹಿಜಾಬ್‌ ಧರಿಸಿ ಬಂದಿದ್ದ ಇನ್ನೂ ಮೂವರು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ. ಮಾರ್ಚ್‌ 27 ರಂದು ಈ ಘಟನೆ ನಡೆದಿತ್ತು.

ಘಟನೆ ಬೆನ್ನಲ್ಲೇ ಸ್ಥಳದಲ್ಲಿ ಪೊಲೀಸ್‌ ಬೂತ್‌ ಸ್ಥಾಪಿಸಲಾಗಿದ್ದು, ಶಾಶ್ವತವಾಗಿ ಅಲ್ಲಿ ಇರಲಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಘಟನೆಯ ಹಿಂದಿನ ಉದ್ದೇಶ ವಿಚಾರಣೆಯ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.