ADVERTISEMENT

Bihar SIR | ತೆಗೆದುಹಾಕಿದ 65 ಲಕ್ಷ ಮತದಾರರು ಬಡವರು: ರಾಹುಲ್‌ ಗಾಂಧಿ ಆರೋಪ

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ; ರಾಹುಲ್‌ ಗಾಂಧಿ ಆರೋಪ

ಪಿಟಿಐ
Published 28 ಆಗಸ್ಟ್ 2025, 16:07 IST
Last Updated 28 ಆಗಸ್ಟ್ 2025, 16:07 IST
‘ಮತದಾರನ ಅಧಿಕಾರ ಯಾತ್ರೆ’ಯಲ್ಲಿ ರಾಹುಲ್‌ ಗಾಂಧಿ, ತೇಜಸ್ವಿ ಯಾದವ್‌–ಪಿಟಿಐ ಚಿತ್ರ
‘ಮತದಾರನ ಅಧಿಕಾರ ಯಾತ್ರೆ’ಯಲ್ಲಿ ರಾಹುಲ್‌ ಗಾಂಧಿ, ತೇಜಸ್ವಿ ಯಾದವ್‌–ಪಿಟಿಐ ಚಿತ್ರ   

ಸೀತಾಮಡಿ, ಮೋತಿಹಾರಿ (ಬಿಹಾರ): ‘ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಸಂದರ್ಭದಲ್ಲಿ 65 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಈ ಎಲ್ಲ ಮತದಾರರು ಬಡವರು ಹಾಗೂ ಸಮಾಜದ ದುರ್ಬಲ ವರ್ಗಕ್ಕೆ ಸೇರಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೂರಿದ್ದಾರೆ.

ಬಿಹಾರದಲ್ಲಿ ‘ವೋಟರ್‌ ಅಧಿಕಾರ ಯಾತ್ರೆ’ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬಿಹಾರದ ಜನರು ಬಿಜೆಪಿ ಹಾಗೂ ಚುನಾವಣಾ ಆಯೋಗವು ಜನರ ಮತದಾನದ ಹಕ್ಕನ್ನು ದೋಚಲು ಬಿಡಬಾರದು. ಬಿಜೆಪಿ ಹಾಗೂ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದ್ದು, ನಾವು ಅದನ್ನು ಬಯಲು ಮಾಡಿದ್ದೇವೆ. ಮಹಾರಾಷ್ಟ್ರ, ಹರಿಯಾಣ, ಕರ್ನಾಟಕದಲ್ಲಿ ಮತಕಳ್ಳತನ ಮಾಡಿಯೇ ಗೆದ್ದಿದೆ. ಬಿಹಾರದಲ್ಲಿಯೂ ಅದನ್ನೇ ಮಾಡಲು ಹೊರಟಿದ್ದು, ಅದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ‘ಮತ ಕಳ್ಳತನ’ಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸಾಕ್ಷಿ ಬಿಡುಗಡೆ ಮಾಡಲಾಗುವುದು’ ಎಂದು ರಾಹುಲ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.