ಬಂಧನ
(ಸಾಂದರ್ಭಿಕ ಚಿತ್ರ)
ಇಂಫಾಲ: ಮಣಿಪುರದ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಮಣಿಪುರ (ಯುಎನ್‌ಎಲ್‌ಎಫ್ (ಪಿ)) ಸಂಘಟನೆಯ 8 ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ತೋಬಾಲ್ ಜಿಲ್ಲೆಯಲ್ಲಿ ಜನರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಯುಎನ್‌ಎಲ್‌ಎಫ್ (ಪಿ) ಸದಸ್ಯರನ್ನು ಸೋಮವಾರ ಬಂಧಿಸಲಾಗಿದೆ. ಮೂರು ಎಕೆ47 ರೈಫಲ್ಸ್, ಎರಡು ಎಕೆ 56 ರೈಫಲ್, ಒಂದು ಎಂ–16 ರೈಫಲ್, ಒಂದು 9 ಎಂಎಂನ ಪಿಸ್ತೂಲ್, 147 ಎಕೆ 47ನ ಜೀವಂತ ಮದ್ದು ಗುಂಡುಗಳು, 20 ಎಂ–16ನ ಜೀವಂತ ಮದ್ದುಗುಂಡು, 9 ಎಂಎಂ ನ 24 ಜೀವಂತ ಗುಂಡು, 16 ಮೊಬೈಲ್ ಫೋನ್, ಒಂದು ಎಸ್‌ಯುವಿ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ಜನರನ್ನು ಸುಲಿಗೆ ಮಾಡುತ್ತಿದ್ದ ಕೇಡರ್‌ನನ್ನು ಇಂಫಾಲದ ಲೈರಾಕ್ ಮಚಿನ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
2023ರಲ್ಲಿ ಈ ಸಂಘಟನೆಯು ಕೇಂದ್ರದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.