ADVERTISEMENT

ಕೊಳವೆ ಬಾವಿಗೆ ಬಿದ್ದಿದ್ದ  8 ವರ್ಷದ ಬಾಲಕ ಸಾವು: 70 ಗಂಟೆ ಕಾರ್ಯಾಚರಣೆ ಅಂತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2022, 6:32 IST
Last Updated 10 ಡಿಸೆಂಬರ್ 2022, 6:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೇತುಲ್: ಮಧ್ಯಪ್ರದೇಶ ರಾಜ್ಯದ ಬೇತುಲ್ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 8 ವರ್ಷದ ಬಾಲಕಮೃತಪಟ್ಟಿದ್ದಾನೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಬೋರ್‌ವೇಲ್‌ನಲ್ಲಿ55 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕ ತನ್ಮಯ್‌ನನ್ನುರಕ್ಷಿಸುವ ರಕ್ಷಣಾ ಕಾರ್ಯಾಚರಣೆ ವಿಫಲವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

70 ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯಲ್ಲಿ ಬಾಲಕನನ್ನು ಉಳಿಸಲು ಸಾಧ್ಯವಾಗಲಿಲ್ಲ. ಕಾರ್ಯಾಚರಣೆ ಸಿಬ್ಬಂದಿ ಬಾಲಕನ ಶವವನ್ನು ಕೊಳವೆ ಬಾವಿಯಿಂದ ಮೇಲಕ್ಕೆ ತಂದರು.

ADVERTISEMENT

ಕೊಳವೆ ಬಾವಿಗೆ ಸಮಾನಾಂತರವಾಗಿ 35 ಅಡಿ ಆಳದವರೆಗೆ ಮತ್ತೊಂದು ಗುಂಡಿ ತೋಡಿ ಬಾಲಕನನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿತ್ತು. ಬೋರ್‌ವೆಲ್‌ ಒಳಗೆ ಅಮ್ಲಜನಕ ಪೂರೈಕೆ ಮಾಡಲಾಗುತ್ತಿತ್ತು ಹಾಗೂ ಸಿಸಿ ಕ್ಯಾಮೆರಾ ಅಳವಡಿಸಿ ಮಗುವಿನ ಚಲನವಲನಗಳ ಮೇಲೆ ನಿಗಾ ವಹಿಸಲಾಗಿತ್ತು.

ಮಂಗಳವಾರ ಸಂಜೆಯಿಂದಲೇ ಬಾಲಕನಿಂದ ಯಾವುದೇ ಚಲನವಲನ ಕಂಡುಬಂದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.