ADVERTISEMENT

ಜಯಾ ಸಂಗ್ರಹದಲ್ಲಿ 8 ಸಾವಿರಕ್ಕೂ ಹೆಚ್ಚು ಪುಸ್ತಕಗಳು!

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 21:32 IST
Last Updated 29 ಜುಲೈ 2020, 21:32 IST
ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ
ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ   

ಚೆನ್ನೈ: ಮೂರೂವರೆ ವರ್ಷಗಳ ಹಿಂದೆ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಚಿನ್ನದ ಒಡವೆಗಳ ಮೇಲಿರುವಷ್ಟೇ ವ್ಯಾಮೋಹ ಪುಸ್ತಕಗಳ ಬಗ್ಗೆಯೂ ಇತ್ತು ಎಂಬ ಸುದ್ದಿ ಈಗ ಹೊರಬಿದ್ದಿದೆ.

ಚೆನ್ನೈನ ಪ್ರತಿಷ್ಠಿತ ಪೊಯೆಸ್ ‌ಗಾರ್ಡನ್‌ನಲ್ಲಿರುವ ಜಯಾ ಅವರ ಬಂಗಲೆಯನ್ನು ವಶಪಡಿಸಿಕೊಂಡಿರುವ ತಮಿಳುನಾಡು ಸರ್ಕಾರವು ಮನೆ ಯಲ್ಲಿದ್ದ ವಸ್ತುಗಳ ಪಟ್ಟಿಯನ್ನು ಇದೇ ಮೊದಲ ಬಾರಿಗೆ
ಬಹಿರಂಗಗೊಳಿಸಿದೆ.

ಬಂಗಲೆಯ ಮೊದಲ ಅಂತಸ್ತಿನಲ್ಲಿದ್ದ ಗ್ರಂಥಾಲಯದಲ್ಲಿದ್ದ 8,376 ಪುಸ್ತಕಗಳಜತೆನಾಲ್ಕು ಕಿಲೋ ಬಂಗಾರ, 601.42 ಗ್ರಾಂ ಬೆಳ್ಳಿ, 11 ಟಿ.ವಿ ಸೆಟ್‌, 38 ಏರ್‌ ಕಂಡಿಷನರ್‌, 10 ರೆಫ್ರಿ ಜರೇಟರ್, 653 ಕಡತಗಳು, 253 ಸ್ಟೇಷನರಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದುಸರ್ಕಾರ ಹೊರಡಿಸಿದ ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಲಾಗಿದೆ.

ADVERTISEMENT

ತಮಿಳುನಾಡು ಸರ್ಕಾರ ಜಯ ಲಲಿತಾ ಅವರ ‘ವೇದ ನಿಲಯಂ’ ವನ್ನು ಜಯಾ ಸ್ಮಾರಕವಾಗಿ ಅಭಿವೃ ದ್ಧಿಪ ಡಿಸುವುದಾಗಿ ಹೇಳಿದೆ.

ಅದಕ್ಕಾಗಿ ಕಳೆದ ವಾರ ₹67.9 ಕೋಟಿ ಪರಿಹಾರ ಹಣವನ್ನು ಸಿವಿಲ್‌ ಕೋರ್ಟ್‌ನಲ್ಲಿ ಸರ್ಕಾರ ಠೇವಣಿ ಇಟ್ಟಿದೆ.

ಜಯಲಲಿತಾ ತಮ್ಮ ಓದುವ ಹವ್ಯಾಸ, ಪುಸ್ತಕ ಪ್ರೀತಿಯನ್ನುಅನೇಕ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದರು.

‘ಜೀವನದ ಸಂಗಾತಿಗಳಂತಿದ್ದ ಪುಸ್ತಕಗಳು ತಮ್ಮ ಒಂಟಿತನ ದೂರ ಮಾಡಿದ್ದವು’ ಎಂದು ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು. 2016ರ ಡಿಸೆಂಬರ್‌ನಲ್ಲಿ ಅವರು ಮೃತಪ‍ಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.