ADVERTISEMENT

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ -ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2021, 11:42 IST
Last Updated 21 ಜೂನ್ 2021, 11:42 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಮ್ಮುಖದಲ್ಲಿ ಎಎಪಿ ಸೇರಿದ ಕುನ್ವಾರ್‌ ವಿಜಯ್‌ ಪ್ರತಾಪ್‌ ಸಿಂಗ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಮ್ಮುಖದಲ್ಲಿ ಎಎಪಿ ಸೇರಿದ ಕುನ್ವಾರ್‌ ವಿಜಯ್‌ ಪ್ರತಾಪ್‌ ಸಿಂಗ್‌   

ಅಮೃತಸರ: ಪಂಜಾಬ್‌ನಲ್ಲಿ ನಡೆಯುವ 2022ರ ವಿಧಾನಸಭೆ ಚುನಾವಣೆ ವೇಳೆ ಸಿಖ್‌ ಸಮುದಾಯದ ವ್ಯಕ್ತಿ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ನಗರದಲ್ಲಿಮಾಧ್ಯಮದವರೊಂದಿಗೆ ಮಾತನಾಡಿದ ಅವರು,ʼಸಿಖ್‌ ಸಮುದಾಯದ ವ್ಯಕ್ತಿಯು ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ.ಇದು ಸಿಖ್ ಸಮುದಾಯದ ಹಕ್ಕು. ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ನಂತರ ಚರ್ಚಿಸಲಾಗುವುದು. ಆದರೆ, ಅದು ಯಾರೇ ಆದರೂ ಸಿಖ್‌ ಸಮುದಾಯದವರೇ ಆಗಿರುತ್ತಾರೆʼ ಎಂದುಹೇಳಿದ್ದಾರೆ.

ಇದೇ ವೇಳೆನಿವೃತ್ತ ಐಪಿಎಸ್‌ ಅಧಿಕಾರಿ ಕುನ್ವಾರ್‌ ವಿಜಯ್‌ ಪ್ರತಾಪ್‌ ಸಿಂಗ್‌ ಅವರು ಅರವಿಂದ್‌ ಕೇಜ್ರಿವಾಲ್‌ ಅವರ ನೇತೃತ್ವದಲ್ಲಿ ಎಎಪಿಗೆ ಸೇರ್ಪಡೆಗೊಂಡರು. ಇದು ಮುಂಬರುವ ವಿಧಾನಸಭೆ ಚುನಾವಣೆಗೆ ಎಎಪಿಗೆಹೊಸ ಉತ್ಸಾಹ ನೀಡಿದೆ. ಈ ಬಗ್ಗೆ ಮಾತನಾಡಿರುವ ದೆಹಲಿ ಸಿಎಂ, ʼಕುನ್ವಾರ್‌ ವಿಜಯ್‌ ಪ್ರತಾಪ್‌ ಅವರು ರಾಜಕಾರಣಿಯಲ್ಲ. ಅವರನ್ನು ʼಜನಸಾಮಾನ್ಯರ ಆರಕ್ಷಕʼ ಎನ್ನಲಾಗಿದೆ. ನಾವೆಲ್ಲರೂ ದೇಶ ಸೇವೆಗಾಗಿ ಇಲ್ಲಿ ಸೇರಿದ್ದೇವೆ. ಅದೇ ಮನೋಭಾವದಿಂದ ಅವರು (ಕುನ್ವಾರ್‌) ಇಂದು ಪಕ್ಷಕ್ಕೆ ಸೇರಿಕೊಂಡಿದ್ದಾರೆʼ ಎಂದರು.

ADVERTISEMENT

117 ಸದಸ್ಯ ಬಲದ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಪೂರ್ಣ ಬಹುಮತ ಪಡೆದುಕೊಂಡಿತ್ತು.ಮೊದಲ ಬಾರಿಗೆ ಸ್ಪರ್ಧಿಸಿದ್ದ ಎಎಪಿ20 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.