ADVERTISEMENT

ರಾಜಕೀಯ ಬೆಳವಣಿಗೆ: 'ಇಂಡಿಯಾ' ಮೈತ್ರಿಯಿಂದ ಹೊರಬಂದ ಎಎಪಿ; ಕಾಂಗ್ರೆಸ್‌ಗೆ ಶಾಕ್

ಏಜೆನ್ಸೀಸ್
Published 18 ಜುಲೈ 2025, 13:17 IST
Last Updated 18 ಜುಲೈ 2025, 13:17 IST
<div class="paragraphs"><p>ಎಎಪಿ-ಕಾಂಗ್ರೆಸ್</p></div>

ಎಎಪಿ-ಕಾಂಗ್ರೆಸ್

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಅರವಿಂದ್ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ‘ ಮೈತ್ರಿಕೂಟದಿಂದ ಹೊರಬಂದಿದೆ.

ADVERTISEMENT

ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟ ಸಭೆ ಕರೆದಿದೆ. ಈ ಸಭೆಗೂ ಮುನ್ನವೇ ಇಂಡಿಯಾ ಒಕ್ಕೂಟದ ಭಾಗವಾಗಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಎಎಪಿ ಶಾಕ್‌ ನೀಡಿದೆ. 

ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿದ ಎಎಪಿ ಸಂಸದ ಸಂಜಯ್ ಸಿಂಗ್ ‘ಇಂಡಿಯಾ‘ ಒಕ್ಕೂಟದಿಂದ ಎಎಪಿ ಹೊರ ಬಂದಿದೆ, ಇನ್ನು ಮುಂದೆ ಎಎಪಿ ಇಂಡಿಯಾ ಒಕ್ಕೂಟದ ಭಾಗವಾಗಿಲ್ಲ ಎಂಬುದನ್ನು ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದರು.

2024ರ ಲೋಕಸಭಾ ಚುನಾವಣೆಯಲ್ಲಿ ಎಎಪಿ ಇಂಡಿಯಾ ಒಕ್ಕೂಟದ ಭಾಗವಾಗಿತ್ತು. ನಂತರ ನಡೆದ ಹರಿಯಾಣ, ದೆಹಲಿ ವಿಧಾನಸಭಾ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. ಇದೀಗ ಮೈತ್ರಿಕೂಟದಿಂದ ಸಂಪೂರ್ಣವಾಗಿ ಹೊರ ಬಂದಿದ್ದೇವೆ. ನಾಳೆ ನಡೆಯಲಿರುವ ಇಂಡಿಯಾ ಕೂಟದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಹೇಳಿದರು.

ಬಿಹಾರ, ದೆಹಲಿ, ಉತ್ತರಪ್ರದೇಶ ಮತ್ತು ಪೂರ್ವಾಂಚಲಗಳಲ್ಲಿ ಜನರ ಮನೆಗಳು ಮತ್ತು ಅಂಗಡಿಗಳನ್ನು ನಾಶಮಾಡುತ್ತಿರುವುದು, ದೆಹಲಿಯಲ್ಲಿ ಕೊಳೆಗೇರಿಗಳ ಧ್ವಂಸ ಮಾಡುತ್ತಿರುವದನ್ನು ಸದನದಲ್ಲಿ ಪ್ರಶ್ನೆ ಮಾಡಲಾಗುವುದು ಎಂದು ಸಂಜಯ್‌ ಸಿಂಗ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.