ADVERTISEMENT

ಅಭಿನಂದನ್‌ ಪದಕ್ಕೆ ಹೊಸ ಅರ್ಥ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 2 ಮಾರ್ಚ್ 2019, 19:54 IST
Last Updated 2 ಮಾರ್ಚ್ 2019, 19:54 IST
   

ನವದೆಹಲಿ: ಶುಭಾಶಯ ತಿಳಿಸಲು ಇದುವರೆಗೆ ಬಳಸಲಾಗುತ್ತಿದ್ದ ‘ಅಭಿನಂದನ’ ಶಬ್ದದ ಅರ್ಥ ಇನ್ನು ಮುಂದೆ ಬದಲಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಅಭಿನಂದನ ಎಂಬ ಪದದ ಅರ್ಥ ಈ ದೇಶದ ಶಕ್ತಿ, ಸಾಮರ್ಥ್ಯವನ್ನು ಸೂಚಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರ ಶೌರ್ಯ, ಪರಾಕ್ರಮಗಳ ಕುರಿತು ಪ್ರಧಾನಿ ಈ ಮಾತು ಹೇಳಿದ್ದಾರೆ.

ADVERTISEMENT

ಭಾರತದ ಪ್ರತಿ ಹೆಜ್ಜೆಯನ್ನು ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ. ನಿಘಂಟುಗಳಲ್ಲಿರುವ ಪದಗಳ ಅರ್ಥ ಗಳನ್ನು ಬದಲಾಯಿಸುವ ಶಕ್ತಿ ಭಾರತಕ್ಕೆ ಇದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಇಂತಹ ಶೌರ್ಯ, ಸಾಹಸ ಮತ್ತು ಪರಾಕ್ರಮಗಳಿಂದಲೇ ಭಾರತ ಮುಂದುವರಿಯಲಿದೆ ಎಂದರು.

ಮತ್ತೆ ಸಮಜೋತಾ ಸಂಚಾರ

ನವದೆಹಲಿ: ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಪರ್ಕ ಕೊಂಡಿಯಾಗಿರುವ ಸಮಜೋತಾ ಎಕ್ಸ್‌ಪ್ರೆಸ್‌ ಭಾನುವಾರ ಮತ್ತೆ ಸಂಚಾರ ಆರಂಭಿಸಲಿದೆ.

ಪಾಕಿಸ್ತಾನ ಮತ್ತು ಭಾರತದ ನಡುವಿನ ತ್ವೇಷಮಯ ವಾತಾವರಣದಿಂದ ಫೆಬ್ರುವರಿ ಅಂತ್ಯದಲ್ಲಿ ಸಮಜೋತಾ ಎಕ್ಸ್‌ಪ್ರೆಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಪಾಕಿಸ್ತಾನ ತನ್ನ ಸೆರೆಯಲ್ಲಿದ್ದ ಭಾರತದ ಪೈಲಟ್‌ ಅಭಿನಂದನ್‌ ಅವರನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಸಮಜೋತಾ ಎಕ್ಸ್‌ಪ್ರೆಸ್‌ ಸಂಚಾರ ಪುನರ್‌ ಆರಂಭಿಸುವ ನಿರ್ಧಾರ ಹೊರಬಿದ್ದಿದೆ.

ಎರಡೂ ರಾಷ್ಟ್ರಗಳ ಮಧ್ಯೆ ಸ್ನೇಹದ ಸೇತುವೆಯಾಗಿರುವ ಸಮಜೋತಾ ಎಕ್ಸ್‌ಪ್ರೆಸ್‌ ಮಾರ್ಚ್ 3ರಂದು ದೆಹಲಿಯಿಂದ ಹೊರಟು ಅಟ್ಟಾರಿ ಗಡಿಯನ್ನು ತಲುಪಲಿದೆ. ಅದೇ ರೀತಿ ಲಾಹೋರ್‌ನಿಂದ ಸೋಮವಾರ ಹೊರಡುವ ರೈಲು ವಾಘಾ ಗಡಿ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.