ADVERTISEMENT

ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್‌ ಕುಟುಂಬಕ್ಕೆ ಸಿಬಿಐ ಕಂಟಕ

ಪತ್ನಿಗೆ ರುಜೀರಾ ಬ್ಯಾನರ್ಜಿಗೆ ಸಿಬಿಐ ನೋಟಿಸ್‌ ನೀಡಿದ ಮರುದಿನವೇ ಪತ್ನಿಯ ಸೋದರಿಗೂ ಸಮನ್ಸ್‌

ಏಜೆನ್ಸೀಸ್
Published 22 ಫೆಬ್ರುವರಿ 2021, 7:10 IST
Last Updated 22 ಫೆಬ್ರುವರಿ 2021, 7:10 IST
ಅಭಿಷೇಕ್‌ ಬ್ಯಾನರ್ಜಿ
ಅಭಿಷೇಕ್‌ ಬ್ಯಾನರ್ಜಿ    

ಕೋಲ್ಕತಾ: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿಯವರ ಪತ್ನಿಯ ಸೋದರಿ ಮೇನಕಾ ಗಂಭೀರ್‌ ಅವರಿಗೆಸಿಬಿಐ ಸಮನ್ಸ್‌ಜಾರಿ ಮಾಡಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರ ಪತ್ನಿಗೆ ಈ ಮೊದಲು ವಿಚಾರಣೆಗೆ ಬರುವಂತೆ ಸಿಬಿಐ ತಿಳಿಸಿತ್ತು. ಈಗ ಪತ್ನಿಯ ಸೋದರಿಗೂ ಸಿಬಿಐ ಸಮನ್ಸ್‌ ನೀಡಿದ್ದು, ಇಡೀ ಕುಟುಂಬಕ್ಕೆ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ ಸುತ್ತಿಕೊಂಡಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವುದಾಗಿ ರುಜೀರಾ ಬ್ಯಾನರ್ಜಿ ಸಿಬಿಐಗೆ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಸೌಗತ ರಾಯ್‌, ಬಿಜೆಪಿಗೆ ಯಾವುದೇ ಮಿತ್ರಪಕ್ಷಗಳಿಲ್ಲ. ಅವರ ಮಿತ್ರರು ಸಿಬಿಐ ಮತ್ತು ಇಡಿ. ತಮ್ಮ ಮಿತ್ರರನ್ನು ಬೆದರಿಕೆಗೆ, ಒತ್ತಡಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ನೋಟಿಸ್ ನೀಡಿದರೆ ಅದನ್ನು ಕಾನೂನುಬದ್ಧವಾಗಿ ಎದುರಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.