ADVERTISEMENT

ಸುನೇತ್ರಾ ಡಿಸಿಎಂ ಆಗುವುದರ ಬಗ್ಗೆ ನನಗೇನು ಗೊತ್ತಿಲ್ಲ: ಶರದ್ ಪವಾರ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 8:26 IST
Last Updated 31 ಜನವರಿ 2026, 8:26 IST
<div class="paragraphs"><p>ಶರದ್ ಪವಾರ್</p></div>

ಶರದ್ ಪವಾರ್

   

ಮುಂಬೈ: ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರ ಡಿಸಿಎಂ ಆಗುವುದರ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಎನ್‌ಸಿಪಿ (ಎಸ್‌ಪಿ) ಬಣದ ನಾಯಕ ಶರದ್ ಪವಾರ್ ಅವರು ಹೇಳಿದ್ದಾರೆ.

ಬಾರಾಮತಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್ ಅವರು, ‘ಅವರು (ಸುನೇತ್ರಾ) ಅವರು ಮಹಾರಾಷ್ಟ್ರ ಡಿಸಿಎಂ ಆಗಲಿದ್ದಾರೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದುಕೊಂಡಿದ್ದೇನೆ ಹೊರತು, ಅವರ ಬಣದ ಪಕ್ಷದಿಂದ ನನಗೇನು ಅಧಿಕೃತವಾಗಿ ತಿಳಿದು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಎನ್‌ಸಿಪಿಯ ಎರಡೂ ಬಣಗಳನ್ನು ಒಗ್ಗೂಡಿಸುವುದು ಅಜಿತ್ ಪವಾರ್ ಕನಸಾಗಿತ್ತು. ಅದರ ಬಗ್ಗೆ ಅವರು ಆಶಾವಾದ ಹೊಂದಿದ್ದರು ಎಂದು ಹೇಳಿದರು.

ಅಜಿತ್ ಅಕಾಲಿಕ ನಿಧನದಿಂದ ಅವರ ಬಣದಿಂದ ಯಾರಾದರೂ ಡಿಸಿಎಂ ಆಗಲಿ ಎಂದು ಬಿಜೆಪಿ ಭಾವಿಸಿದಂತಿದೆ. ಪ್ರಪುಲ್ ಪಟೇಲ್, ಸುನೀಲ್ ತತ್ಕರೆ ಅವರು ಡಿಸಿಎಂ ಆಗಬಹುದು ಎಂಬ ಮಾತುಗಳನ್ನು ನಾನು ಈ ಮೊದಲು ಕೇಳಿದ್ದೆ ಎಂದು ಶರದ್ ಪವಾರ್ ಹೇಳಿದರು.

ಸುದ್ದಿಗೋಷ್ಠಿ ವೇಳೆ ಬಾರಾಮತಿಯ ಗೋವಿಂದ್‌ಬಾಗ್‌ನಲ್ಲಿ ಶರದ್ ಪವಾರ್ ಅವರನ್ನು ಅಜಿತ್ ಅವರ ಮಗ ಪಾರ್ಥ್ ಪವಾರ್ ಭೇಟಿಯಾದರು. ಈ ವೇಳೆ ಸಂಸದೆ ಸುಪ್ರಿಯಾ ಸುಳೆ, ಶಾಸಕರಾದ ರೋಹಿತ್ ಪವಾರ್, ಯುಗೇಂದ್ರ ಪವಾರ್ ಅವರು ಇದ್ದರು.

ರಾಜ್ಯಸಭೆ ಸದಸ್ಯೆಯಾಗಿರುವ ಸುನೇತ್ರಾ ಅವರು ಡಿಸಿಎಂ ಆಗಲಿದ್ದಾರೆ ಎಂಬ ಚರ್ಚೆಗಳು ಬಿರುಸುಪಡೆದುಕೊಂಡಿವೆ. ಸದ್ಯ ಮಂಬೈನ ಅವರ ದೇವಗಿರಿ ನಿವಾಸದಲ್ಲಿ ಸುನೇತ್ರಾ ಅವರು ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.