ನವದೆಹಲಿ: ಅದಾನಿ ಸಮೂಹವು, ಮಧ್ಯಪ್ರದೇಶದಲ್ಲಿ ಕಲ್ಲಿದ್ದಲು ಗಣಿ ಯೋಜನೆಗಾಗಿ ಸರ್ಕಾರಿ ಮತ್ತು ಅರಣ್ಯ ಪ್ರದೇಶದಲ್ಲಿನ ಮರಗಳನ್ನು ಕಡಿಯುವ ಮೂಲಕ ಅರಣ್ಯ ಹಕ್ಕುಗಳ ಕಾಯ್ದೆಯನ್ನು (ಎಫ್‌ಆರ್‌ಎ) ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಮಧ್ಯಪ್ರದೇಶ ಸರ್ಕಾರ ಈ ಆರೋಪವನ್ನು ಆಧಾರರಹಿತ ಎಂದು ಅಲ್ಲಗಳೆದಿದ್ದು, ಕೇಂದ್ರ ಪರಿಸರ ಸಚಿವಾಲಯವು ಈ ಯೋಜನೆಗೆ ಅಂತಿಮ ಅನುಮೋದನೆ ನೀಡಿದೆ ಎಂದು ಹೇಳಿದೆ.
‘ಮೋದಿ ಸರ್ಕಾರವು 2019ರಲ್ಲಿ ಅದಾನಿ ಸಮೂಹಕ್ಕೆ ಈ ಯೋಜನೆಯನ್ನು ಹಂಚಿಕೆ ಮಾಡಿತ್ತು. 2025ರಲ್ಲಿ ಯಾವುದೇ ಕಾನೂನಿನ ಅನುಮತಿಗಳನ್ನು ಪಡೆಯದೆ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದು ‘ಮೋದಾನಿ’ ಕಾನೂನು ವ್ಯವಸ್ಥೆ‘ ಎಂದು ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಧಿರೌಲಿಯಲ್ಲಿ ‘ಎಫ್‌ಆರ್‌ಎ’ ಉಲ್ಲಂಘಿಸಿ ಮರಗಳನ್ನು ಕಡಿಯಲಾಗಿದೆ. ಇಲ್ಲಿನ ಗ್ರಾಮಸ್ಥರು, ಸ್ಥಳೀಯ ಬುಡಕಟ್ಟು ಪಂಗಡ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.