ADVERTISEMENT

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ 221 ಮೀಟರ್ ಎತ್ತರದ ಶ್ರೀರಾಮ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 2:38 IST
Last Updated 25 ನವೆಂಬರ್ 2018, 2:38 IST
   

ಅಯೋಧ್ಯೆ: ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಾಣಕ್ಕೆ ಯೋಗಿ ಆದಿತ್ಯನಾಥ ಸರ್ಕಾರಹಸಿರು ನಿಶಾನೆ ತೋರಿಸಿದೆ.
ಪ್ರತಿಮೆ ನಿರ್ಮಾಣದ ಬಗ್ಗೆ ಯೋಗಿ ಸರ್ಕಾರ ಶನಿವಾರ ರಾತ್ರಿ ಅಂತಿಮ ನಿರ್ಧಾರ ಕೈಗೊಂಡಿದೆ.

ಪ್ರತಿಮೆ ಎಷ್ಟು ಎತ್ತರ?
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮನ ಪ್ರತಿಮೆ 151 ಮೀಟರ್ ಎತ್ತರವಿರಲಿದೆ, ಪ್ರತಿಮೆಯ ಮೇಲೆ 20 ಮೀಟರ್ ಎತ್ತರದ ಛತ್ರಿ ಇರಲಿದ್ದು, 50 ಮೀಟರ್ ಎತ್ತರದ ಆಧಾರ ಪೀಠವಿದೆ ಎಂದು ಮಾಹಿತಿ ವಿಭಾಗದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವನೀಶ್ ಅವಸ್ತಿ ಹೇಳಿದ್ದಾರೆ.ಪ್ರತಿಮೆಯನ್ನು ಕಂಚಿನಿಂದ ಮಾಡಲಾಗುವುದು.

ಅಧಿಕೃತ ಮಾಹಿತಿ ಪ್ರಕಾರ ಈ ಪ್ರತಿಮೆಯ ತಳದಲ್ಲಿ ಆಧುನಿಕ ಮ್ಯೂಸಿಯಂ ಇರಲಿದ್ದು, ಅಯೋಧ್ಯೆಯ ಇತಿಹಾಸವನ್ನು ಹೇಳಲಿದೆ.ರಾಜ ಮನುವಿನಿಂದ ಹಿಡಿದು ರಾಮ ಜನ್ಮಭೂಮಿಯ ಇಂದಿನ ಪರಿಸ್ಥಿತಿ ಮತ್ತು ಇಕ್ಷಾಕು ವಂಶದ ಕಥೆ ಈ ಮ್ಯೂಸಿಯಂನಲ್ಲಿರಲಿದೆ.

ಅದೇ ವೇಳೆ ವಿಷ್ಣುವಿನ ಎಲ್ಲ ಅವತಾರಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿರಲಿದೆ.
ವಿಗ್ರಹ ಎಲ್ಲಿ ನಿರ್ಮಿಸಬೇಕು ಎಂಬುದರ ಬಗ್ಗೆ ಸ್ಥಳದ ಆಯ್ಕೆಗಾಗಿ ಮಣ್ಣಿನ ಪರೀಕ್ಷೆ, ಗಾಳಿಯ ವೇಗದ ದಿಕ್ಕಿನ ಪರೀಕ್ಷೆ ನಡೆಯುತ್ತಿದೆ ಎಂದು ಸರ್ಕಾರದ ವಕ್ತಾರ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.