ADVERTISEMENT

ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತು ಅಫ್ಗಾನ್‌ನಿಂದ ಭಾರತಕ್ಕೆ ಬಂದ ಬಾಲಕ!

ಪಿಟಿಐ
Published 23 ಸೆಪ್ಟೆಂಬರ್ 2025, 2:02 IST
Last Updated 23 ಸೆಪ್ಟೆಂಬರ್ 2025, 2:02 IST
<div class="paragraphs"><p>ಪ್ರಾತಿನಿಧಿಕ ಚಿತ್ರ (ಮೆಟಾ ಎಐ ಚಿತ್ರ)</p></div>

ಪ್ರಾತಿನಿಧಿಕ ಚಿತ್ರ (ಮೆಟಾ ಎಐ ಚಿತ್ರ)

   

ನವದೆಹಲಿ: ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತು ಬಾಲಕನೊಬ್ಬ ಅಫ್ಗಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಬಂದಿದ್ದಾನೆ. ಭಾನುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಘಟನೆ ನಡೆದಿದೆ. ಎರಡು ಗಂಟೆಯ ಪ್ರಯಾಣದ ಬಳಿಕ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿದಾಗ ಬಾಲಕ ಇರುವುದು ಗೊತ್ತಾಗಿದ್ದು, ಅದೇ ವಿಮಾನದಲ್ಲಿ ಆತನನ್ನು ವಾಪಸ್‌ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. 

ವಿಮಾನ ಲ್ಯಾಂಡ್‌ ಆದ ಬಳಿಕ ಬಾಲಕನೊಬ್ಬ ವಿಮಾನದ ಸುತ್ತ ಓಡಾಡುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. 

ADVERTISEMENT

ಕುಂದುಜ್ ನಗರದ ಮೂಲದವನಾದ ಬಾಲಕನನ್ನು ವಿಮಾನಯಾನ ಸಿಬ್ಬಂದಿ ಬಂಧಿಸಿ ಭದ್ರತಾ ಪಡೆ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ವಿಚಾರಣೆ ವೇಳೆ ‘ನಾನು ಕಾಬೂಲ್ ವಿಮಾನ ನಿಲ್ದಾಣಕ್ಕೆ ನುಸುಳಿದೆ. ನಂತರ ವಿಮಾನದ ಹಿಂಭಾಗದ ಲ್ಯಾಂಡಿಂಗ್ ಗೇರ್ ವಿಭಾಗದೊಳಗೆ ಪ್ರವೇಶಿಸಿದೆ. ಕುತೂಹಲದಿಂದ ಈ ರೀತಿ ಮಾಡಿದ್ದೇನೆ’ ಎಂದು ತಿಳಿಸಿದ್ದಾನೆ.

ವಿಮಾನದ ಲ್ಯಾಂಡಿಂಗ್‌ ಗೇರ್ ವಿಭಾಗವನ್ನು ತಪಾಸಣೆ ನಡೆಸಲಾಗಿದ್ದು, ವಿಮಾನ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಅಫ್ಗಾನಿಸ್ತಾನಕ್ಕೆ ಮರು ಪ್ರಯಾಣಿಸಿದ ಅದೇ ವಿಮಾನದಲ್ಲಿ ಬಾಲಕನನ್ನು ಭದ್ರತಾ ಸಿಬ್ಬಂದಿ ವಾಪಸ್‌ ಕಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.