ADVERTISEMENT

ಕಾಂಗ್ರೆಸ್‌ನಲ್ಲಿ ಪಿ.ವಿ.ನರಸಿಂಹ ರಾವ್‌ ಮೂಲೆಗುಂಪಾಗಿದ್ದೇಕೆ?: ಮೊಮ್ಮಗ ಸುಭಾಷ್‌

ಏಜೆನ್ಸೀಸ್
Published 28 ಜೂನ್ 2019, 7:36 IST
Last Updated 28 ಜೂನ್ 2019, 7:36 IST
 ಪಿ.ವಿ.ನರಸಿಂಹ ರಾವ್‌ ಮೊಮ್ಮಗ ಸುಭಾಷ್‌,  ಪಿ.ವಿ.ನರಸಿಂಹ ರಾವ್‌.
ಪಿ.ವಿ.ನರಸಿಂಹ ರಾವ್‌ ಮೊಮ್ಮಗ ಸುಭಾಷ್‌, ಪಿ.ವಿ.ನರಸಿಂಹ ರಾವ್‌.   

ನವದೆಹಲಿ:ಕಾಂಗ್ರೆಸ್‌ನ 1996ರ ಸೋಲಿನ ನಂತರ ಅವರು (ಪಿ.ವಿ.ನರಸಿಂಹ ರಾವ್‌) ಹಲವು ಕಾರಣಗಳನ್ನು ಮುಂದಿಟ್ಟು ಮೂಲೆಗುಂಪು ಮಾಡಲಾಯಿತು. ಆ ಕಾರಣಗಳು ಅವರ ಸರ್ಕಾರದ ನೀತಿಗಳಿಗೆ ಸಂಬಂಧಿಸಿದ್ದು ಆಗಿರಲಿಲ್ಲ ಎಂದು ಪಿ.ವಿ.ನರಸಿಂಹ ರಾವ್ ಅವರ ಮೊಮ್ಮಗ ಹಾಗೂ ಬಿಜೆಪಿ ತೆಲಂಗಾಣ ಘಟಕದ ವಕ್ತಾರ ಎನ್‌.ವಿ.ಸುಭಾಷ್‌ ಹೇಳಿದರು.

ಶುಕ್ರವಾರನರಸಿಂಹ ರಾವ್ ಅವರ ಹುಟ್ಟುಹಬ್ಬದ (ಜೂನ್ 28)ಸಂದರ್ಭದಲ್ಲಿ ಮಾತನಾಡಿರುವ ಸುಭಾಷ್‌, ಗಾಂಧಿ–ನೆಹರು ಕುಟುಂಬವನ್ನು ಹೊರತುಪಡಿಸಿ ಬೇರೆ ಯಾರಿಗೂ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಕಾಪಾಡಲು ಸಾಧ್ಯವಿಲ್ಲ ಎಂದುಅವರು (ಕಾಂಗ್ರೆಸ್ಸಿಗರು) ಭಾವಿಸಿದ್ದಾರೆ. ಇದೊಂದೇ ಕಾರಣಕ್ಕೆಸಮರ್ಥ ನಾಯಕನಾಗಿದ್ದರೂ ನರಸಿಂಹರಾವ್ ಅವರನ್ನು ಕಾಂಗ್ರೆಸ್ ಮೂಲೆಗುಂಪು (ಸೈಡ್‌ಲೈನ್) ಮಾಡಿತು ಎಂದು ಟೀಕಿಸಿದರು.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ನಿಧನಾ ನಂತರದ ಸಂಕಷ್ಟ ಪರಿಸ್ಥಿತಿಯಲ್ಲಿಪ್ರಧಾನಿಯಾಗಿದ್ದ ದಿವಂಗತ ಪಿ.ವಿ. ನರಸಿಂಹ ರಾವ್ ಅವರು ಕಾಂಗ್ರೆಸ್ ಪಕ್ಷ ಮತ್ತು ದೇಶಕ್ಕೆ ನೀಡಿದ ಕೊಡುಗೆಯನ್ನು ವಿಶ್ವದಾದ್ಯಂತ ಜನರು ಮೆಚ್ಚುತ್ತಾರೆಎಂದು ಸುಭಾಷ್‌ ತಿಳಿಸಿದ್ದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

ADVERTISEMENT

ಆದರೆ 1996 ನಂತರದ ದಿನಗಳಲ್ಲಿಕಾಂಗ್ರೆಸ್‌ನ ವೈಫಲ್ಯಗಳಿಗೆ ಪಿ.ವಿ.ನರಸಿಂಹ ರಾವ್‌ ಅವರೇ ಕಾರಣ ಎಂದು ಹೇಳಲಾಗುತ್ತಿದೆ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ನರಸಿಂಹರಾವ್ ಅವರ ಕೊಡುಗೆಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಈ ಕುರಿತುಕ್ಷಮೆಯಾಚಿಸಬೇಕು ಮತ್ತು ನರಸಿಂಹ ರಾವ್‌ ಅವರಿಗೆ ಗೌರವ ಸಲ್ಲಿಸಬೇಕು ಎಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಸುಭಾಷ್ ಹೇಳಿದ್ದಾರೆ.

ಜೂನ್ 28 1921ರಂದು ಜನಿಸಿದ್ದನರಸಿಂಹ ರಾವ್‌, ಡಿ.23 2004ರಂದು ನಿಧನರಾದರು.

ನರಸಿಂಹ ರಾವ್‌ ಒಳ್ಳೆ ಕೆಲಸದ ಬಗ್ಗೆ ಕಾಂಗ್ರೆಸ್‌ ಎಂದೂ ಮಾತನಾಡಲಿಲ್ಲ: ಮೋದಿ

ಲೋಕಸಭೆಯಲ್ಲಿರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಮಂಗಳವಾರ ಉತ್ತರ ನೀಡಿ, ಕಾಂಗ್ರೆಸ್‌ ಪಕ್ಷವನ್ನು ಪುನಃ ಟೀಕೆಗೆ ಗುರಿಯಾಗಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ‘ಗಾಂಧಿ– ನೆಹರೂ ಪರಿವಾರದವರನ್ನು ಬಿಟ್ಟು ಬೇರೆ ಯಾರ ಕೆಲಸವನ್ನೂ ಆ ಪಕ್ಷ ಗುರುತಿಸುವುದಿಲ್ಲ’ ಎಂದಿದ್ದರು.

‘ಮಾಜಿ ಪ್ರಧಾನಿಗಳಾದ ಅಟಲ್‌ಬಿಹಾರಿ ವಾಜಪೇಯಿ ಹಾಗೂ ಪಿ.ವಿ. ನರಸಿಂಹ ರಾವ್‌ ಅವರ ಒಳ್ಳೆಯ ಕೆಲಸಗಳ ಬಗ್ಗೆ ಕಾಂಗ್ರೆಸ್‌ ಎಂದೂ ಮಾತನಾಡಿಲ್ಲ’ ಕುಟುಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.