ಅಮರಾವತಿ: ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಅಂಗವಿಕಲರ ಗೌರವಧನವನ್ನು ಏರಿಕೆ ಮಾಡುವಂತೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಹಾರ್ ಜನಶಕ್ತಿಯ ಪಕ್ಷದ ಸಂಸ್ಥಾಪಕ ಬಚ್ಚು ಕಡೂ ಅವರು ಸರ್ಕಾರದ ಭರವಸೆ ಬಳಿಕ ಶನಿವಾರ ಹೋರಾಟ ಕೈ ಬಿಟ್ಟಿದ್ದಾರೆ.
ಕಡೂ ಅವರ 7 ದಿನಗಳಿಂದ ತಿವಾಸ ತಾಲ್ಲೂಕಿನ ಗುರುಕುಂಜ್ ಮೊಜಾರಿ ಪ್ರದೇಶದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಹೋರಾಟಕ್ಕೆ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು.
ಇದರ ಬೆನ್ನಲ್ಲೇ ಸಚಿವ ಉದಯ್ ಸಾಮಂತ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಭರವಸೆ ಈಡೇರಿಸುವ ವಾಗ್ದಾನ ನೀಡಿದರು.
‘ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ 15 ದಿನಗಳ ಒಳಗಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡುವುದಾಗಿ ಕಂದಾಯ ಸಚಿವ ಚಂದ್ರಶೇಖರ್ ಬಾವಂಕುಲೆ ತಿಳಿಸಿದ ಪತ್ರವನ್ನು ಬಚ್ಚು ಅವರಿಗೆ ಹಸ್ತಾಂತರಿಸಿದರು. ಅಂಗವಿಕಲರ ಗೌರವ ಧನವನ್ನು ₹6 ಸಾವಿರ ಏರಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದ ಬಳಿಕ ಉಪವಾಸ ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.