ADVERTISEMENT

ಗೋವಾ ವಿಧಾನಸಭೆ ಚುನಾವಣೆ: ದೀಪಾವಳಿ ವೇಳೆಗೆ ಇತರ ಪಕ್ಷಗಳೊಂದಿಗೆ ಜಿಎಫ್‌ಪಿ ಮೈತ್ರಿ

ಪಿಟಿಐ
Published 11 ಅಕ್ಟೋಬರ್ 2021, 5:36 IST
Last Updated 11 ಅಕ್ಟೋಬರ್ 2021, 5:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಣಜಿ: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಗೋವಾ ಫಾರ್ವರ್ಡ್‌ ಪಾರ್ಟಿಯು (ಜಿಎಫ್‌ಪಿ) ಇದೇ ದೀಪಾವಳಿ ವೇಳೆಗೆ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಜಿಎಫ್‌ಪಿಯ ಮುಖ್ಯಸ್ಥ ವಿಯಜ್‌ ಸರ್‌ದೇಸಾಯಿ ಹೇಳಿದ್ದಾರೆ.

ಭಾನುವಾರ ಸಂಜೆ ದಕ್ಷಿಣ ಗೋವಾ ಜಿಲ್ಲೆಯ ಫರ್ತೋರ್ಡಾದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೋತ್ತರ ಮೈತ್ರಿಗೆ ಜಿಎಫ್‌ಪಿ ಮಾಡಿದ ಮನವಿಯನ್ನುಗೋವಾದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ತಿರಸ್ಕರಿಸಿ ತನ್ನ ಜವಾಬ್ದಾರಿ ಮತ್ತು ಕರ್ತವ್ಯದಿಂದ ನುಣುಚಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

‘ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಜಿಎಫ್‌ಪಿ ಕಳೆದ ಎರಡು ವರ್ಷಗಳಿಂದ ಶ್ರಮಿಸುತ್ತಿದೆ. ನಾವು ಇತರರ ಅನಿಶ್ಚಿತತೆಯ ಧೋರಣೆಯಿಂದ ಸುಮ್ಮನೆ ಕುಳಿತುಕೊಳ್ಳಲು ಮತ್ತು ಸಮಯ ವ್ಯರ್ಥ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.