ನವದೆಹಲಿ: ಗುಜರಾತ್‌ನ ಅಹಮದಾ ಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ ವಿಮಾನ ದುರಂತ ಕುರಿತಂತೆ ಈ ವಾರದಲ್ಲೇ ಪ್ರಾಥಮಿಕ ತನಿಖಾ ವರದಿ ಬಿಡುಗಡೆ ಮಾಡುವುದಾಗಿ ಸಂಸತ್ತಿನ ಸ್ಥಾಯಿ ಸಮಿತಿಗೆ ವಿಮಾನ ಅಪಘಾತ
ತನಿಖಾ ಸಂಸ್ಥೆ (ಎಎಐಬಿ) ಬುಧವಾರ
ತಿಳಿಸಿದೆ.
ಜೆಡಿಯು ಸಂಸದ ಸಂಜಯ್ ಝಾ ನೇತೃತ್ವದ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಗಳ ಮೇಲಿನ ಸ್ಥಾಯಿ ಸಮಿತಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನದ ಬ್ಲ್ಯಾಕ್ ಬಾಕ್ಸ್‌ಗೆ (ಕಪ್ಪು ಪೆಟ್ಟಿಗೆ) ಹಾನಿ ಆಗಿಲ್ಲ. ಅದರಲ್ಲಿನ ದತ್ತಾಂಶ ಪರಿಶೀಲನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿದೇಶಿ ತಂತ್ರಜ್ಞರ ಸಹಕಾರ ಪಡೆದು ತನಿಖೆ ನಡೆಸಲಾಗಿದೆ ಎಂದು ಎಎಐಬಿ ಪ್ರಧಾನ ನಿರ್ದೇಶಕ ಜಿವಿಜಿ ಯುಗಾಂಧರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.