ADVERTISEMENT

Ahmedabad Plane Crash | ವಿಮಾನದಲ್ಲಿ ಕಪ್ಪು ಪೆಟ್ಟಿಗೆ ಬಹುಮುಖ್ಯ ಏಕೆ?

ಪಿಟಿಐ
Published 13 ಜೂನ್ 2025, 5:00 IST
Last Updated 13 ಜೂನ್ 2025, 5:00 IST
<div class="paragraphs"><p>ಏರ್ ಇಂಡಿಯಾ ವಿಮಾನದ ಅವಶೇಷ&nbsp;</p></div>

ಏರ್ ಇಂಡಿಯಾ ವಿಮಾನದ ಅವಶೇಷ 

   

(ಪಿಟಿಐ ಚಿತ್ರ)

ಅಹಮದಾಬಾದ್: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ ಕನಿಷ್ಠ 265 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಈ ಘಟನೆಗೆ ಕಾರಣ ಏನೆಂಬುದನ್ನು ತಿಳಿಯಲು ಬ್ಲ್ಯಾಕ್‌ಬಾಕ್ಸ್‌ ಅಥವಾ ಕಪ್ಪು ಪೆಟ್ಟಿಗೆ ಸಹಾಯಕ. ಅಷ್ಟಕ್ಕೂ ಈ 'ಕಪ್ಪು ಪೆಟ್ಟಿಗೆ' ಎಂದರೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

ಅಪಘಾತಕ್ಕೆ ಏನು ಕಾರಣ ಎನ್ನುವುದನ್ನು ವಿಮಾನದಲ್ಲಿರುವ ಬ್ಲ್ಯಾಕ್‌ಬಾಕ್ಸ್‌ ಅಥವಾ ಕಪ್ಪು ಪೆಟ್ಟಿಗೆಯಲ್ಲಿರುವ ದತ್ತಾಂಶಗಳು ಹೇಳುತ್ತವೆ.

ಫ್ಲೈಟ್‌ ಡೇಟಾ ರೆಕಾರ್ಡರ್‌ ಎಂದು ಕರೆಯಲಾಗುವ ಕಿತ್ತಳೆ ಬಣ್ಣದ ಈ ಸಾಧನದಲ್ಲಿ ವಿಮಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಅಂದರೆ, ಅಪಘಾತಕ್ಕೂ ಮೊದಲು ವಿಮಾನದ ವೇಗ, ಎತ್ತರ, ಮಾರ್ಗ ನಕ್ಷೆ ಸೇರಿದಂತೆ ಎಲ್ಲ ತಾಂತ್ರಿಕ ವಿವರಗಳೂ ದಾಖಲಾಗುತ್ತಿರುತ್ತವೆ.

ಬೆಂಕಿ, ಸ್ಫೋಟ ಸೇರಿದಂತೆ ಯಾವುದೇ ಸ್ವರೂಪದ ಅವಘಡ ನಡೆದಿದ್ದರೂ ಹಾನಿಗೀಡಾಗದ ರೀತಿಯಲ್ಲಿ ಈ ಬ್ಲ್ಯಾಕ್‌ ಬಾಕ್ಸ್‌ ಅನ್ನು ರೂಪಿಸಲಾಗುತ್ತಿರುತ್ತದೆ. ಸಾಮಾನ್ಯವಾಗಿ ಒಂದು ವಿಮಾನದಲ್ಲಿ ಎರಡು ಬ್ಲ್ಯಾಕ್‌ ಬಾಕ್ಸ್‌ಗಳನ್ನು ಅಳವಡಿಸಲಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.