ADVERTISEMENT

ಎ.ಐ ಶೃಂಗಸಭೆ: ನಿರ್ಣಯಕ್ಕೆ 88 ರಾಷ್ಟ್ರಗಳ ಸಹಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 16:25 IST
Last Updated 21 ಫೆಬ್ರುವರಿ 2026, 16:25 IST
<div class="paragraphs"><p>ಐಐಟಿ ಕಾನ್ಪುರ ಮತ್ತು ಇತರರ ಸಹಭಾಗಿತ್ವದಲ್ಲಿ ನಿರ್ಮಾಣವಾಗಿದ್ದ ರೋಬೊಟ್‌ ಶ್ವಾನವೊಂದು ಗಮನ ಸೆಳೆಯಿತು </p></div>

ಐಐಟಿ ಕಾನ್ಪುರ ಮತ್ತು ಇತರರ ಸಹಭಾಗಿತ್ವದಲ್ಲಿ ನಿರ್ಮಾಣವಾಗಿದ್ದ ರೋಬೊಟ್‌ ಶ್ವಾನವೊಂದು ಗಮನ ಸೆಳೆಯಿತು

   

– ಪಿಟಿಐ ಚಿತ್ರ

ನವದೆಹಲಿ: ಕೃತಕ ಬುದ್ಧಿ ಮತ್ತೆಯ(ಎ.ಐ) ಪ್ರಯೋಜನಗಳನ್ನು ಸಮಾನವಾಗಿ ಹಂಚಿಕೆ ಮಾಡುವ ಬದ್ಧತೆಯನ್ನು ಹೊಂದುವ ನಿರ್ಣಯದೊಂದಿಗೆ ‘ಎ.ಐ ಇಂಪ್ಯಾಕ್ಟ್‌ ಶೃಂಗಸಭೆ–2026’ ಶನಿವಾರ ಮುಕ್ತಾಯಗೊಂಡಿತು. 

ADVERTISEMENT

ಅಮೆರಿಕ, ಬ್ರಿಟನ್‌, ಚೀನಾ, ಫ್ರಾನ್ಸ್‌ ರಷ್ಯಾ, ಐರೋಪ್ಯ ಒಕ್ಕೂಟ ಸೇರಿದಂತೆ 88 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಈ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿವೆ.

ಫೆ.16ರಂದು ಆರಂಭಗೊಂಡಿದ್ದ ಶೃಂಗಸಭೆಯಲ್ಲಿ ಒಟ್ಟು 118 ದೇಶಗಳು ಭಾಗಿಯಾಗಿವೆ. ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಸೇರಿದಂತೆ ಹಲವರು ಎ.ಐ ಅವಕಾಶಗಳು, ಅಪಾಯಗಳು ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.