ADVERTISEMENT

ಬಿಹಾರ ಚುನಾವಣೆ | ಪ್ರಚಾರದ ವೇಳೆ ಎಐ ದುರ್ಬಳಕೆ ಬೇಡ: ಆಯೋಗ ಎಚ್ಚರಿಕೆ

ಪಿಟಿಐ
Published 9 ಅಕ್ಟೋಬರ್ 2025, 6:06 IST
Last Updated 9 ಅಕ್ಟೋಬರ್ 2025, 6:06 IST
ರಾಜ್ಯ ಚುನಾವಣಾ ಆಯೋಗ
ರಾಜ್ಯ ಚುನಾವಣಾ ಆಯೋಗ   

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಡೀಪ್‌ಫೇಕ್‌ಗಳ ಮೂಲಕ ಕೃತಕ ಬುದ್ಧಿಮತ್ತೆಯನ್ನು (ಎಐ) ದುರುಪಯೋಗಪಡಿಸಿಕೊಳ್ಳದಂತೆ ಚುನಾವಣಾ ಆಯೋಗ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.

ಸಾಮಾಜಿಕ ಮಾಧ್ಯಮ ಅಥವಾ ಜಾಹೀರಾತುಗಳಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಹಂಚಿಕೊಳ್ಳುವ ಪೋಸ್ಟ್‌ಗಳಿಗೆ ಎಐ ಅಥವಾ ಡಿಜಿಟಲ್‌ ರೂಪಿತವಾಗಿದ್ದು ಎಂದು ನಮೂದಿಸಬೇಕು ಎಂದು ಆಯೋಗ ಸೂಚಿಸಿದೆ.

ಚುನಾವಣೆಯ ಸಂದರ್ಭದಲ್ಲಿ ವಾತಾವರಣ ಹಾಳಾಗದಂತೆ ನೋಡಿಕೊಳ್ಳಲು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುವ ಪೋಸ್ಟ್‌ಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗುವುದು ಎಂದು ಆಯೋಗ ಹೇಳಿದೆ.

ADVERTISEMENT

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನ. 6 ಮತ್ತು11 ರಂದು ಮತದಾನ ನಡೆಯಲಿದೆ. ನ.14ರಂದು ಮತಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.